HEALTH TIPS

ಜಾಗತಿಕ ದಕ್ಷಿಣದ ಧ್ವನಿಯಾಗಿರುವ ಭಾರತ ಮೌನವಾಗಿರಲು ಸಾಧ್ಯವಿಲ್ಲ: ಇರಾನ್ ಸಚಿವ

ಟೆಹರಾನ್: ಮಧ್ಯಪ್ರಾಚ್ಯದ ಬಿಕ್ಕಟ್ಟು, ಸಂಘರ್ಷ ತೀವ್ರಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್‍ನ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಮೊಹಮ್ಮದ್ ರೆಝಾ ಬಹ್ರಾಮಿ `ಇದು ತಾತ್ಕಾಲಿಕ ಬಿಕ್ಕಟ್ಟು ಅಥವಾ ಅಮೆರಿಕದೊಂದಿಗಿನ ದ್ವಿಪಕ್ಷೀಯ ವಿವಾದವಲ್ಲ.

ಇರಾನ್‍ನ ಮೇಲೆ ಉದ್ದೇಶಪೂರ್ವಕ ಹೇರಿರುವ ಯುದ್ದವಾಗಿದೆ' ಎಂದು ಹೇಳಿದ್ದಾರೆ.

ಇರಾನ್‍ನ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯನ್ನು ಭಾರತ ಖಂಡಿಸದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ` ಇಂತಹ ವಿಷಯಗಳಲ್ಲಿ ಏಶ್ಯಾದ ಸ್ವತಂತ್ರ ಪ್ರಭಾವಿ ರಾಷ್ಟ್ರಕ್ಕೆ ಪ್ರಮುಖ ಪಾತ್ರವಿದೆ. ಭಾರತ ತನ್ನ ವಿದೇಶಾಂಗ ಕಾರ್ಯನೀತಿಯ ದಿಕ್ಸೂಚಿಯಾಗಿ ಕಾರ್ಯತಂತ್ರದ ಸ್ವಾಯತ್ತತೆಯನ್ನು ಸ್ಥಿರವಾಗಿ ವ್ಯಾಖ್ಯಾನಿಸಿದೆ. ಪ್ರಮುಖ ಶಕ್ತಿಗಳೊಂದಿಗೆ ಸಮತೋಲಿತ ಸಂಬಂಧವನ್ನು ನಿರ್ವಹಿಸುತ್ತದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಮತ್ತು ಜಾಗತಿಕ ದಕ್ಷಿಣದ ಪ್ರಮುಖ ಧ್ವನಿಯಾಗಿ, ಭಾರತವು ಮೌನವಾಗಿರದೆ, ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಸಕ್ರಿಯ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಇರಾನ್ ಮತ್ತು ಭಾರತ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಎರಡು ಪ್ರಾಚೀನ ನಾಗರಿಕತೆಗಳಾಗಿವೆ. ಈ ಪರಂಪರೆಯು ಸೂಕ್ಷ್ಮ ಮತ್ತು ಪರಿವರ್ತನೆಯ ಕ್ಷಣಗಳಲ್ಲಿ ಜವಾಬ್ದಾರಿಯುತ ಸಹಕಾರಕ್ಕೆ ಅರ್ಥಪೂರ್ಣ ಅಡಿಪಾಯವನ್ನು ಒದಗಿಸುತ್ತದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries