ಪೆರ್ಲ: ಮಹಿಳಾ ದಿನಾಚರಣೆ ಕಾರ್ಯಕ್ರಮ ಪೆರ್ಲ ಶ್ರೀ ಶಾರದಾ ಮರಾಟಿ ಬೋಡಿರ್ಂಗ್ ಹಾಲ್‍ನಲ್ಲಿ ಜರುಗಿತು. ಶ್ರೀ ಶಾರದಾ ಮರಾಟಿ ಸೇವಾ ಸಂಘ, ಶಾರದಾ ಮರಾಟಿ ಮಹಿಳಾ ವೇದಿಕೆ ಪೆರ್ಲ, ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಪೆರ್ಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಪೆರ್ಲ ಮರಾಟಿ ಬೋಡಿರ್ಂಗ್ ಹಾಲ್ ನಲ್ಲಿ ಮಾರ್ಚ್ 8ರಂದು ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು .
ಬೆಳಗ್ಗೆ 10 ಗಂಟೆಗೆ ಸರಿಯಾಗಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಪೂರ್ಣಿಮಾಪುರಂದರ ಇವರು ಧ್ವಜಾರೋಹಣವನ್ನು ನಡೆಸಿ ಸಭಾ ಕಾರ್ಯಕ್ರಮ ದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಟೀಚರ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಕಾಸರಗೋಡು ಸರ್ಕಾರಿ ಆಸ್ಪತ್ರೆಯ ನಿವೃತ್ತ ಸ್ತ್ರೀರೋಗತಜ್ಞೆ ಡಾಕ್ಟರ್ ಜ್ಯೋತಿ ಇವರನ್ನು ಸನ್ಮಾನಿಸಲಾಯಿತು. ಪಡ್ರೆ ಶಾಲೆಯ ನಿವೃತ್ತ ಶಿಕ್ಷಕಿ ಚಂದ್ರಾವತಿ ಸಜಂಗದ್ದೆ, ಸಂಘದ ಅಧ್ಯಕ್ಷೆ ಪುಷ್ಪಅಮೆಕ್ಕಳ, ಕಾರ್ಯದರ್ಶಿ ಗೋಪಿಕೃಷ್ಣ ಬದಿಯಡ್ಕ, ನಿವೃತ್ತ ಸರ್ಕಾರಿ ವೈದ್ಯಾಧಿಕಾರಿ ನಾರಾಯಣ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಅಶ್ವಿತಾ ಜಾಲಕೊಟ್ಯ ಪ್ರಾರ್ಥನೆ ಹಾಡಿದರು. ಭವಾನಿ ಏಳ್ಕಾನ ರವರು ಸ್ವಾಗತಿಸಿದರು. ಮಂಜುಶ್ರೀ ನಲ್ಕ ಕಾರ್ಯಕ್ರಮ ನಿರೂಪಿಸಿದರು. ನಳಿನಿ ಪಳ್ಳಕಾನ ವಂದಿಸಿದರು.



