ಚಂಡಿಗಢ: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಸೇನಾ ದಾಳಿಯ ಹಿನ್ನೆಲೆಯಲ್ಲಿ ಹರ್ಯಾಣದ ಅಕ್ಕಿ ರಫ್ತುದಾರರು ಪಾವತಿ ವಿಳಂಬ ಎದುರಿಸುತ್ತಿದ್ದಾರೆ ಹಾಗೂ ಇರಾನ್, ಅಪಘಾನಿಸ್ತಾನಕ್ಕೆ ಸಾಗಣೆಗೆ ಅಡ್ಡಿ ಉಂಟಾಗುತ್ತಿದೆ.
''ಸಂಘರ್ಷದ ಕೆಲವು ಪರಿಣಾಮಗಳು ವ್ಯಾಪಾರದ ಮೇಲೆ ಈಗಾಗಲೇ ಆರಂಭವಾಗಿದೆ'' ಎಂದು ಅಕ್ಕಿ ರಫ್ತುದಾರರ ಅಸೋಸಿಯೇಶನ್‌ನ ರಾಜ್ಯ ಘಟಕದ ಅಧ್ಯಕ್ಷ ಸುಶೀಲ್ ಕುಮಾರ್ ಜೈನ್ ತಿಳಿಸಿದ್ದಾರೆ.
ಇರಾನ್‌ನ ಅತಿ ದೊಡ್ಡ ಬಂದರು 'ಬಂದರ್ ಅಬ್ಬಾಸ್' ಮೂಲಕ ಇರಾನ್ ಅಥವಾ ಅಫಘಾನಿಸ್ತಾನಕ್ಕೆ ಹೋಗುವ ಸಾಗಣೆಗಳನ್ನು ತಡೆ ಹಿಡಿಯಲಾಗಿದೆ. ಪರಿಸ್ಥಿತಿ ಸುಧಾರಿಸುವ ವರೆಗೆ ಈ ಸಾಗಣೆಗಳು ಸ್ಥಗಿತಗೊಳ್ಳಲಿವೆ. ಇದರಿಂದ ಮಾರುಕಟ್ಟೆ ಮೇಲೆ ಪರಿಣಾಮ ಉಂಟಾಗಲಿವೆ. ಪಾವತಿ ಕೂಡ ವಿಳಂಬವಾಗಬಹುದು ಎಂದು ಜೈನ್ ತಿಳಿಸಿದ್ದಾರೆ.

