HEALTH TIPS

ಕೇಂದ್ರ ಸರಕಾರದಿಂದ ತುರ್ತು ಅಧಿಕಾರ ಬಳಕೆ: ಎಲ್‌ಪಿಜಿ ಉತ್ಪಾದನೆ ಹೆಚ್ಚಿಸಲು ಸಂಸ್ಕರಣಾಗಾರಗಳಿಗೆ ಆದೇಶ

ನವದೆಹಲಿ: ತುರ್ತು ಅಧಿಕಾರಗಳನ್ನು ಬಳಸಿಕೊಂಡಿರುವ ಕೇಂದ್ರ ಸರಕಾರವು ಮಧ್ಯಪ್ರಾಚ್ಯದಲ್ಲಿಯ ಬಿಕ್ಕಟ್ಟಿನಿಂದ ಪೂರೈಕೆಗೆ ವ್ಯತ್ಯಯವುಂಟಾಗಿರುವ ಹಿನ್ನೆಲೆಯಲ್ಲಿ ಅಡುಗೆ ಇಂಧನದ ಕೊರತೆಯನ್ನು ತಡೆಗಟ್ಟಲು ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠಗೊಳಿಸುವಂತೆ ಸಂಸ್ಕರಣಾಗಾರಗಳಿಗೆ ಆದೇಶಿಸಿದೆ ಎಂದು ವರದಿಯಾಗಿದೆ.

ವಿಶ್ವದ ಎರಡನೇ ಅತಿ ದೊಡ್ಡ ಎಲ್‌ಪಿಜಿ ಆಮದು ದೇಶವಾಗಿರುವ ಭಾರತವು ಕಳೆದ ವರ್ಷ 33.15 ಮಿಲಿಯನ್ ಮೆ.ಟನ್ ಅಡುಗೆ ಅನಿಲವನ್ನು ಬಳಸಿದೆ. ಎಲ್‌ಪಿಜಿ ಬ್ಯುಟೇನ್ ಮತ್ತು ಪ್ರೊಪೇನ್ ಮಿಶ್ರಣವಾಗಿದೆ.

ದೇಶದಲ್ಲಿ ಬಳಕೆಯಾಗುತ್ತಿರುವ ಎಲ್‌ಪಿಜಿಯಲ್ಲಿ ಆಮದುಗಳು ಸುಮಾರು ಮೂರನೇ ಎರಡರಷ್ಟು ಪಾಲು ಹೊಂದಿದ್ದು,ಈ ಪೈಕಿ ಸುಮಾರು ಶೇ.85-90ರಷ್ಟನ್ನು ಮಧ್ಯಪ್ರಾಚ್ಯವು ಪೂರೈಸುತ್ತದೆ.

ಎಲ್ಲ ತೈಲ ಸಂಸ್ಕರಣಾಗಾರಗಳು ಬ್ಯುಟೇನ್ ಮತ್ತು ಪ್ರೊಪೇನ್ ಲಭ್ಯತೆಯನ್ನು ಗರಿಷ್ಠಗೊಳಿಸುವಂತೆ ಹಾಗು ಅವುಗಳು ಎಲ್‌ಪಿಜಿ ಉತ್ಪಾದನೆಗೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಗುರುವಾರ ರಾತ್ರಿ ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.

ಮನೆಗಳಿಗೆ ವಿತರಣೆಗಾಗಿ ಸರಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ ಪೆಟ್ರೋಲಿಯಂ ಕಾರ್ಪೊರೇಷನ್‌ಗಳಿಗೆ ಎಲ್‌ಪಿಜಿ,ಪ್ರೊಪೇನ್ ಮತ್ತು ಬ್ಯುಟೇನ್ ಅನ್ನು ಲಭ್ಯವಾಗಿಸುವಂತೆ ಸರಕಾರವು ಉತ್ಪಾದಕರಿಗೆ ಸೂಚಿಸಿದೆ.

ಸರಕಾರಿ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಸುಮಾರು 33.20 ಕೋಟಿ ಸಕ್ರಿಯ ಎಲ್‌ಪಿಜಿ ಗ್ರಾಹಕರಿದ್ದಾರೆ.

ಎಲ್‌ಪಿಜಿ ಉತ್ಪಾದನೆಗಾಗಿ ಕಡ್ಡಾಯವಾಗಿ ಪ್ರೊಪೇನ್ ಮತ್ತು ಬ್ಯುಟೇನ್ ಪೂರೈಕೆಯಿಂದಾಗಿ ರಿಲಯನ್ಸ್ ಇಂಡಸ್ಟೀಸ್‌ನಿಂದ ಗ್ಯಾಸೋಲಿನ್ ಮಿಶ್ರಣ ಘಟಕ ಅಲ್ಕಲೇಟ್‌ಗಳ ಉತ್ಪಾದನೆಯನ್ನು ಮೊಟಕುಗೊಳಿಸುತ್ತದೆ.

ರಿಲಯನ್ಸ್ ಕಳೆದ ವರ್ಷ ಪ್ರತಿ ತಿಂಗಳಿಗೆ ಸುಮಾರು ನಾಲ್ಕು ಕಾರ್ಗೊಗಳಷ್ಟು ಅಲ್ಕಲೇಟ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಿತ್ತು.

ಪೆಟ್ರೋಕೆಮಿಕಲ್‌ಗಳ ಉತ್ಪಾದನೆಗೆ ಪ್ರೊಪೇನ್ ಮತ್ತು ಬ್ಯುಟೇನ್ ಪೂರೈಸದಂತೆಯೂ ಸರಕಾರವು ಸಂಸ್ಕರಣಾಗಾರಗಳಿಗೆ ಆದೇಶಿಸಿದೆ.

ಎಲ್‌ಪಿಜಿ ಉತ್ಪಾದನೆಗೆ ಪ್ರೊಪೇನ್ ಮತ್ತು ಬ್ಯುಟೇನ್ ಪೂರೈಕೆಯು ಎಲ್‌ಪಿಜಿಗಿಂತ ಹೆಚ್ಚಿನ ಬೆಲೆಗಳನ್ನು ಹೊಂದಿರುವ ಪೋಲ್‌ಪ್ರೊಪಿಲೀನ್ ಮತ್ತು ಅಲ್ಕಲೇಟ್‌ಗಳಂತಹ ಉತ್ಪನ್ನಗಳನ್ನು ತಯಾರಿಸುವ ಪೆಟ್ರೋಕೆಮಿಕಲ್ ಕಂಪನಿಗಳ ಲಾಭವನ್ನು ಕುಗ್ಗಿಸುತ್ತದೆ ಎಂದು ವ್ಯಾಪಾರ ಮೂಲವೊಂದು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries