ಬದಿಯಡ್ಕ: ಕೇರಳ ಬ್ರಾಹ್ಮಣ ಸಭಾ ನೇತೃತ್ವದಲ್ಲಿ ಕಾಸರಗೋಡಿನಿಂದ ತಿರುವನಂತಪುರದ ತನಕ ನಡೆಯಲಿರುವ ಶಂಕರ ಸಂದೇಶ ಯಾತ್ರೆಗೆ ಶ್ರೀ ಎಡನೀರು ಮಠದಿಂದ ಚಾಲನೆ ನೀಡಲಾಯಿತು.
ಜಗದ್ಗುರು ಶಂಕರಾಚಾರ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರು ಶಂಕರಾಚಾರ್ಯರ ಭಾವಚಿತ್ರಕ್ಕೆ ತುಳಸೀಮಾಲೆ ಅರ್ಪಿಸಿ ಚಾಲನೆ ನೀಡಿ ಶುಭ ಹಾರೈಸಿದರು. ಜನಜಾಗೃತಿಯನ್ನು ಮೂಡಿಸುವುದು ಇಂದಿನ ಕಾಲದಲ್ಲಿ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಬ್ರಾಹ್ಮಣ ಸಭಾವು ಹಮ್ಮಿಕೊಂಡ ಶಂಕರ ಸಂದೇಶ ಯಾತ್ರೆ ಯಶಸ್ವಿಯಾಗಲಿ ಎಂದು ಮಂತ್ರಾಕ್ಷತೆಯನ್ನಿತ್ತು ಹರಸಿದರು.
ಕೇರಳ ಬ್ರಾಹ್ಮಣ ಸಭಾದ ರಾಜ್ಯ ಅಧ್ಯಕ್ಷ ಎಚ್. ಗಣೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಆರ್. ಪರಮೇಶ್ವರನ್, ಕೋಶಾಧಿಕಾರಿ ಕೆ.ಆರ್. ಜಯರಾಮನ್, ಶ್ರೀ ಶಂಕರ ಸಂದೇಶ ಯಾತ್ರೆಯ ಸಂಚಾಲಕ ಟಿ.ಎಸ್. ವಿಶ್ವನಾಥ ಅಯ್ಯರ್, ಕಾಸರಗೋಡು ಬ್ರಾಹ್ಮಣ ಸಭಾ ಜಿಲ್ಲಾ ಕಾರ್ಯದರ್ಶಿ ಎಸ್. ಸುನಿಲ್, ಕೋಶಾಧಿಕಾರಿ ಡಾ. ಪಿ.ಇ.ಗಣಪತಿ, ಪ್ರಮುಖರಾದ ಡಾ. ಮಹಾದೇವ್, ಆರ್. ಎನ್. ಸುಬ್ರಹ್ಮಣ್ಯನ್, ಪಾರ್ವತಿ, ರಮೇಶ್, ಸುಬ್ರಹ್ಮಣ್ಯನ್ ಟಿ.ಎಂ., ಸುಬ್ರಹ್ಮಣ್ಯನ್ ಕೆ.ಕೆ., ಸುಬ್ರಹ್ಮಣ್ಯನ್ ಪಿ.ಇ., ಮಾಲತಿ, ಆರತಿ ಉಪಸ್ಥಿತರಿದ್ದರು.

.jpg)
.jpg)
