HEALTH TIPS

ಸುಪ್ರೀಂ ಕೋರ್ಟ್ 'ದಯಾ ಮರಣ'ಕ್ಕೆ ಅನುಮತಿ ನೀಡಿದ್ದ ಹರೀಶ್ ರಾಣಾ ನಿಧನ!

 ನವದೆಹಲಿ: ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಬದುಕುತ್ತಿದ್ದ 32 ವರ್ಷ ವಯಸ್ಸಿನ ಹರೀಶ್ ರಾಣಾ ನಿಧನರಾಗಿದ್ದಾರೆ. ಇವರಿಗೆ ಮಾರ್ಚ್ ಇತ್ತೀಚಿಗೆ ಸುಪ್ರೀಂ ಕೋರ್ಟ್ ಭಾರತದ ಮೊದಲ ಕಾನೂನುಬದ್ಧ ನಿಷ್ಕ್ರಿಯ ದಯಾಮರಣಕ್ಕೆ (Passive Euthanasia) ಅನುಮತಿ ನೀಡಿತು. 


13 ವರ್ಷಗಳ ಕಾಲ ಕೋಮಾದಲ್ಲಿದ್ದ ನಂತರ, ಘನತೆಯಿಂದ ಸಾವನ್ನಪ್ಪುವ ಹಕ್ಕಿನಡಿ ಜೀವ ರಕ್ಷಕ ವ್ಯವಸ್ಥೆಯನ್ನು ತೆಗೆದುಹಾಕಲು ಕೋರ್ಟ್ ಅವಕಾಶ ನೀಡಿತ್ತು.

2013 ರಲ್ಲಿ ಸಂಭವಿಸಿದ ಅಪಘಾತದ ನಂತರ ಹರೀಶ್ ರಾಣಾ ಅವರು ಮೆದುಳಿನ ಗಾಯದಿಂದಾಗಿ ಕೋಮಾದಲ್ಲಿದ್ದರು. ಭಾರತದ ಸರ್ವೋಚ್ಚ ನ್ಯಾಯಾಲಯವು ಮಾರ್ಚ್ 11, 2026 ರಂದು ಅವರ ಕುಟುಂಬದ ಮನವಿಯ ಮೇರೆಗೆ ನಿಷ್ಕ್ರಿಯ ದಯಾಮರಣಕ್ಕೆ ಅನುಮೋದನೆ ನೀಡಿತು. ಇದು ಭಾರತದ ಇತಿಹಾಸದಲ್ಲಿ ಇಂತಹ ಮೊದಲ ಪ್ರಕರಣವಾಗಿದೆ.

ವೈದ್ಯಕೀಯ ಮಂಡಳಿಯು ಹರೀಶ್ ಅವರು ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ವರದಿ ಮಾಡಿತ್ತು. ಇದರಿಂದಾಗಿ ಕುಟುಂಬವು ಅವರ ಸಂಕಟವನ್ನು ಕೊನೆಗೊಳಿಸಲು ಈ ನಿರ್ಧಾರ ಕೈಗೊಂಡಿತು.

2013 ರಿಂದ ಕೋಮಾದಲ್ಲಿದ್ದ 31 ವರ್ಷದ ಅವರನ್ನು ಗಾಜಿಯಾಬಾದ್‌ನ ಮನೆಯಿಂದ ಏಮ್ಸ್ ನಲ್ಲಿರುವ ಡಾ. ಬಿ. ಆರ್ ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ರೋಟರಿ ಕ್ಯಾನ್ಸರ್ ಆಸ್ಪತ್ರೆಯ ಉಪಶಾಮಕ ನಿಗಾ ಘಟಕಕ್ಕೆ ಶನಿವಾರ ಸ್ಥಳಾಂತರಿಸಲಾಗಿತ್ತು.

ಪ್ರೊಫೆಸರ್ ಮತ್ತು ಅರಿವಳಿಕೆ ವಿಭಾಗದ ಮುಖ್ಯಸ್ಥರಾದ ಡಾ.ಸೀಮಾ ಮಿಶ್ರಾ ನೇತೃತ್ವದ ವಿಶೇಷ ವೈದ್ಯಕೀಯ ತಂಡವನ್ನು ದಯಾಮರಣ ಪ್ರಕ್ರಿಯೆ ಕಾರ್ಯಗತಗೊಳಿಸಲು ರಚಿಸಲಾಗಿತ್ತು.

ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು: ಗಾಜಿಯಾಬಾದ್‌ನ ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ! ಏನಿದು ಪ್ರಕರಣ?

ಹರೀಶ್ ರಾಣಾಗೆ ನಿಷ್ಕ್ರಿಯ ದಯಾಮರಣವನ್ನು ಅನುಮತಿಸುವ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಏಮ್ಸ್ ದಯಾಮರಣ ಪ್ರಕ್ರಿಯೆ ಆರಂಭಿಸಿತ್ತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries