ಟೆಲ್‍ಅವೀವ್: ಅಮೆರಿಕಾದೊಂದಿಗೆ ಹೊಂದಾಣಿಕೆಯಲ್ಲಿ ಇರಾನ್ ವಿರುದ್ಧ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದೆ. ಇರಾನ್‍ನಲ್ಲಿನ ` ಭಯೋತ್ಪಾದನಾ ಆಡಳಿತ'ದಿಂದ ಎದುರಾದ ಅಸ್ತಿತ್ವದ ಬೆದರಿಕೆ ನಿವಾರಿಸಲು ಈ ಕ್ರಮ ಅಗತ್ಯವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ಘೋಷಿಸಿದ್ದಾರೆ.
ಮಿಲಿಟರಿ ಕಾರ್ಯಾಚರಣೆ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ನೆತನ್ಯಾಹು `ಇರಾನ್ ಮೇಲಿನ ದಾಳಿಯನ್ನು ಬೆಂಬಲಿಸಿದ ನನ್ನ ಮಹಾನ್ ಮಿತ್ರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ನಾಯಕತ್ವಕ್ಕಾಗಿ ಧನ್ಯವಾದ ಹೇಳುತ್ತೇನೆ. 47 ವರ್ಷಗಳಿಂದ ಆಯತುಲ್ಲಾ ಆಡಳಿತವು ಅನೇಕ ಅಮೆರಿಕನ್ನರನ್ನು, ಇಸ್ರೇಲಿಯನ್ನರನ್ನು ಮತ್ತು ತನ್ನದೇ ನಾಗರಿಕರನ್ನು ಹತ್ಯೆಗೈದಿದೆ. ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯಲು ನಿರ್ಣಾಯಕ ಮಿಲಿಟರಿ ಕ್ರಮ ಅತ್ಯಗತ್ಯವಾಗಿತ್ತು' ಎಂದು ಹೇಳಿದರು.

