HEALTH TIPS

ಪೆಟ್ರೋಲ್-ಡೀಸೆಲ್ ಖಾಲಿಯಾಗಿಲ್ಲ, ಜನರು ಅನಗತ್ಯ ವದಂತಿಗಳಿಗೆ ಕಿವಿಗೊಡಬೇಡಿ: BPCL

 ಬೆಂಗಳೂರು: ವಿವಿಧೆಡೆ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖಾಲಿ ಆಗಿವೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಇವು ಸಂಪೂರ್ಣವಾಗಿ ಆಧಾರರಹಿತವಾದವು ಎಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ತಿಳಿಸಿದೆ. 


ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕಂಪನಿ, ದೇಶದಲ್ಲಿ ಇಂಧನ ಕೊರತೆ ಉಂಟಾಗಿಲ್ಲ.

ಭಾರತ, ಪೆಟ್ರೋಲ್ ಮತ್ತು ಡೀಸೆಲ್‌ನ ನಿವ್ವಳ ರಫ್ತುದಾರ. ಹೀಗಾಗಿ ನಮ್ಮಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್‌ನ ಸಾಕಷ್ಟು ದಾಸ್ತಾನುಗಳಿವೆ. ಸರಬರಾಜು ಸರಪಳಿಗಳು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ.

ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಕಡಿತ; ಒಲೆಯ ಹೊಗೆಗೆ ಅಡುಗೆ ತಯಾರಕರು ಹಿಂದೇಟುWesಣ ಂsiಚಿ: ಸಂಘರ್ಷ ಶಮನಕ್ಕೆ ಇರಾನ್ ಮುಂದೆ 15 ಪ್ರಸ್ತಾವನೆ ಇಟ್ಟ ಟ್ರಂಪ್

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ನಿರಂತರ ಇಂಧನ ಪೂರೈಸಲು ಬದ್ಧವಾಗಿದೆ ಎಂದಿದೆ.

ಜನರು ಭಯಭೀತರಾಗಬಾರದು ಅಥವಾ ಅನಗತ್ಯ ಖರೀದಿಯಲ್ಲಿ ತೊಡಗಬಾರದು. ಇಂಧನ ಲಭ್ಯತೆ ಸ್ಥಿರವಾಗಿದೆ ಮತ್ತು ಸಾಕಷ್ಟು ಪ್ರಮಾಣದಲ್ಲಿದೆ ಎಂದು ಬಿಪಿಸಿಎಲ್ ತಿಳಿಸಿದೆ.

ಇತ್ತೀಚೆಗೆ ಹಲವೆಡೆ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಖಾಲಿ ಆಗಿವೆ. ಹೀಗಾಗಿ ಜನರು ಇತರೆ ಬಂಕ್‌ಗಳಲ್ಲಿ ಹೆಚ್ಚಿನ ಪೆಟ್ರೋಲ್‌, ಡಿಸೇಲ್‌ಗಳನ್ನು ಮುಂಚಿತವಾಗಿ ಖರೀದಿಸುತ್ತಿದ್ದಾರೆ ಎಂಬ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries