ತಿರುವನಂತಪುರಂ: ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಹಿಂತೆಗೆದುಕೊಂಡ ಬಳಿಕ ಮಿಲ್ಮಾ ಹಾಲಿನ ಬೆಲೆಯನ್ನು ತಕ್ಷಣ ಹೆಚ್ಚಿಸಬೇಕೆಂದು ಮಿಲ್ಮಾ ಒತ್ತಾಯಿಸಿದೆ. ಲೀಟರ್‍ಗೆ 4 ರೂ. ಹೆಚ್ಚಿಸುವ ಶಿಫಾರಸಿಗೆ ಅನುಮೋದನೆ ಪಡೆಯಲು ಮಿಲ್ಮಾ ಅಧ್ಯಕ್ಷ ಕೆ.ಎಸ್. ಮಣಿ ಇಂದು ಮತ್ತೆ ಸಚಿವೆ ಜೆ. ಚಿಂಜು ರಾಣಿ ಅವರನ್ನು ಭೇಟಿ ಮಾಡಿರುವರು. ನೀತಿ ಸಂಹಿತೆ ಮೇ 6 ರವರೆಗೆ ಜಾರಿಯಲ್ಲಿದೆ. ಸರ್ಕಾರ ಇನ್ನೂ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ.
ಕಳೆದ ವರ್ಷ ನವೆಂಬರ್‍ನಿಂದ ಮಿಲ್ಮಾ ಹಾಲಿನ ಬೆಲೆ ಹೆಚ್ಚಳಕ್ಕೆ ಒತ್ತಾಯಿಸುತ್ತಿದೆ. ಸ್ಥಳೀಯಾಡಳಿತ ಚುನಾವಣೆಯ ಸಂದರ್ಭದಲ್ಲಿ ಮುಂದೂಡಲಾಗಿದ್ದ ನಿರ್ಧಾರವನ್ನು ಚುನಾವಣಾ ಫಲಿತಾಂಶದಲ್ಲಿನ ಹಿನ್ನಡೆಯಿಂದಾಗಿ ಮತ್ತೆ ಮುಂದೂಡಲಾಗಿತ್ತು. ವಿಧಾನಸಭಾ ಚುನಾವಣೆಯೊಂದಿಗೆ ಹಿನ್ನಡೆಯಾಗುವ ಭಯದಿಂದ ಸರ್ಕಾರ ಮಿಲ್ಮಾ ಶಿಫಾರಸನ್ನು ಅನುಮೋದಿಸಲಿಲ್ಲ.
ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕೆಂದು ಮಿಲ್ಮಾ ಪದೇ ಪದೇ ಒತ್ತಾಯಿಸಿದರೂ, ಸರ್ಕಾರ ಅನುಕೂಲಕರ ನಿಲುವು ತೆಗೆದುಕೊಳ್ಳಲು ಸಿದ್ಧವಾಗಿಲ್ಲ.

