HEALTH TIPS

ಗೂಗಲ್‌ನಿಂದ 5ಟಿಬಿ ಸ್ಟೋರೇಜ್ ಸಂಪೂರ್ಣ ಉಚಿತ, ಪಡೆಯುವುದು ಹೇಗೆ?

ಗೂಗಲ್‌ನಿಂದ 5ಟಿಬಿ ಸ್ಟೋರೇಜ್ ಸಂಪೂರ್ಣ ಉಚಿತ, ಪಡೆಯುವುದು ಹೇಗೆ?, ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗತ್ತಿದ್ದಂತೆ ಸ್ಟೋರೇಜ್ ಎಷ್ಟಿದ್ದರೂ ಸಾಲುವುದಿಲ್ಲ. ಇದೀಗ ಗೂಗಲ್ ನೀಡಿದ ಈ ಆಫರ್ ಗಿಟ್ಟಿಸಿಕೊಳ್ಳುವುದು ಹೇಗೆ?

ಫೋನ್‌ನಲ್ಲಿನ ಫೋಟೋ, ವಿಡಿಯೋ,ಡಾಕ್ಯುಮೆಂಟ್ ಕ್ಲೌಡ್‌ನಲ್ಲಿ ಸ್ಟೋರ್ ಆಗುವ ಕಾರಣ ಬಹುಬೇಗ ಸ್ಟೋರೇಜ್ ಸಮಸ್ಯೆ ಎದುರಾಗುತ್ತದೆ.

ಫೋನ್ ಸ್ಟೋರೇಜ್ ಫುಲ್, ಜಿಮೇಲ್ ಸ್ಟೋರೇಜ್ ಫುಲ್ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತದೆ. ಈ ವೇಳೆ ವಾರ್ಷಿಕ ಅಥವಾ ತಿಂಗಳಿಗೆ ಕ್ಲೌಡ್ ಸ್ಟೋರೇಜ್ ಖರೀದಿ ಅನಿವಾರ್ಯವಾಗುತ್ತದೆ. ಇದೀಗ ಗೂಗಲ್ ಕೆಲ ವಿಶೇಷ ಆಫರ್ ನೀಡಿದೆ. ಈ ಮೂಲಕ ಬರೋಬ್ಬರಿ 5ಟಿಬಿ ಸ್ಟೋರೇಜ್ ಉಚಿತವಾಗಿ ಸಿಗಲಿದೆ.

ನೀವು ಗೂಗಲ್ ಎಐ ಪ್ರೋ ಪ್ಲಾನ್ ಸಬ್‌ಸ್ಕ್ರೈಬ್ ಮಾಡಿಕೊಂಡಿದ್ದರೆ, ಇದೀಗ ಅಟೋಮ್ಯಾಟಿಕ್ ಆಗಿ 5ಟಿಬಿ ಸ್ಟೋರೇಜ್ ಸಂಪೂರ್ಣ ಉಚಿತವಾಗಿ ಸಿಗಲಿದೆ. ಎಐ ಪ್ರೋ ಹಾಗೂ ಎಐ ಅಲ್ಟ್ರಾ ಚಂದಾದಾರಿಕೆ ಹೊಂದಿರುವ ಗ್ರಾಹಕರಿಗೆ 5ಟಿಬಿ ಕ್ಲೌಡ್ ಸ್ಟೋರೇಜ್ ಸಂಪೂರ್ಣ ಉಚಿತವಾಗಿ ಲಭ್ಯವಿದೆ. ಕಳೆದ ವಾರದಿಂದಲೇ ಗ್ರಾಹಕರ ಖಾತೆಗೆ 5ಟಿಬಿ ಸ್ಟೋರೇಜ್ ನೀಡಲಾಗಿದೆ.

ಗೂಗಲ್ ಎಐ ಪ್ರೊ ಪ್ಲಾನ್ ಹೊಂದಿದ್ದವರಿಗೆ 2ಟಿಬಿ ಸ್ಟೋರೇಜ್ ನೀಡುತ್ತಿತ್ತು. ಇದೀಗ 5ಟಿಬಿ ಅಪ್‌ಗ್ರೇಡ್ ಮಾಡಲಾಗಿದೆ. ಇದು ಸಂಪೂರ್ಣ ಉಚಿತವಾಗಿದೆ. ಗೂಗಲ್ ಡ್ರೈವ್, ಗೂಗಲ್ ಜಿಮೆಲ್, ಗೂಗಲ್ ಫೋಟೋಸ್ ಸೇರಿದಂತೆ ಕ್ಲೌಡ್ ಸ್ಟೋರೇಜ್ ಸ್ಪೇಸ್ ನೀಡುತ್ತದೆ. ಇದು ಆಟೋಮ್ಯಾಟಿಕ್ ಆಗಿ ನಿಮ್ಮ ಖಾತೆಗೆ ನೀಡಲಾಗಿರುತ್ತದೆ.

ಜಿಯೋ ಗ್ರಾಹಕರಿಗೆ ಇದರಲ್ಲಿ ಬಂಪರ್ ಆಫರ್ ಇದೆ. 349 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡುವ ಗ್ರಾಹಕರಿಗೆ 18 ತಿಂಗಳ ವರೆಗೆ ಎಐ ಪ್ರೋ ಸಬ್‌ಸ್ಕ್ರಿಪ್ಶನ್ ಉಚಿತವಾಗಿ ಸಿಗಲಿದೆ. ಜಿಯೋ ಮೈ ಆಯಪ್ ಮೂಲಕ ಕ್ಲೈಮ್ ಮಾಡಿ ಈ ಆಫರ್ ಪಡೆಯಲು ಸಾಧ್ಯವಿದೆ.

ಗೂಗಲ್ ಪಿಕ್ಸೆಲ್ ಫೋನ್ ಬಳಕೆದಾರರು ಅಥಾವ ಗೂಗಲ್ ಎ ಪ್ರೋ ಪ್ಲಾನ್ ಹೊಂದಿರುವವರಿಗೆ ಈ 5ಟಿಬಿ ಸ್ಟೋರೇಜ್ ಆಟೋಮ್ಯಾಟಿಕ್ ಆಗಿ ಸಿಗಲಿದೆ. ಇನ್ನು ಜಿಯೋ ಗ್ರಾಹಕರು ಆಯಪ್ ಮೂಲಕ ಕ್ಲೈಮ್ ಮಾಡಿಕೊಳ್ಳಬೇಕು. ಜಿಯೋ ಆಫರ್ ಇಲ್ಲದಿದ್ದರೆ ಈ ಯೋಜನೆ ಬೆಲೆ ತಿಂಗಳಿಗೆ 1950 ರೂಪಾಯಿಯಿಂದ ವಾರ್ಷಿಕ 19500 ರೂಪಾಯಿವರೆಗೆ ಆಗಲಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries