ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ದಾಖಲಾತಿ ಇಳಿಮುಖವಾಗಿದೆಯೇ ಹಾಗೂ ತಿರಸ್ಕೃತ ವೀಸಾಗಳು ಹಾಗೂ ವೀಸಾಗಳ ವಿರಳ ಲಭ್ಯತೆ ಇದಕ್ಕೆ ಕಾರಣವೇ ಎಂಬ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಕೀರ್ತಿ ವರ್ಧನ ಸಿಂಗ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಬಿಡುಗಡೆಗೊಳಿಸಿದ ವಿಸಿಟರ್ ಇನ್ಫಾರ್ಮೇಶನ್ ಸಿಸ್ಟಮ್ (ಸೆವಿಸ್) ಮ್ಯಾಪಿಂಗ್ ಟೂಲ್ ಬಿಡುಗಡೆಗೊಳಿಸಿದ ದತ್ತಾಂಶವನ್ನು ಸಚಿವರು ಸದನದಲ್ಲಿ ಹಂಚಿಕೊಂಡಿದ್ದರು.
2025ರ ಫೆಬ್ರವರಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ, ವೃತ್ತಿಪರ, ಹೈಸ್ಕೂಲ್, ಭಾಷಾ ತರಬೇತಿ, ವಿಮಾನಚಾಲನೆ ಶಿಕ್ಷಣ, ಪದವಿ, ಸ್ನಾತಕೋತ್ತರ,ಡಾಕ್ಟರೇಟ್ ಸೇರಿದಂತೆ ಅಮೆರಿಕದಲ್ಲಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ 3,78,787 ಭಾರತೀಯ ವಿದ್ಯಾರ್ಥಿಗಳಿದ್ದರೆ, 2026ರ ಫೆಬ್ರವರಿಯಲ್ಲಿ ಅವರ ಸಂಖ್ಯೆ 3,52,644 ಆಗಿದೆ ಎಂದು ಕೀರ್ತಿವರ್ಧನ್ ಸಿಂಗ್ ಸದನಕ್ಕೆ ತಿಳಿಸಿದರು.
ಅಮೆರಿಕದ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಒಟ್ಟಾರೆ ದಾಖಲಾತಿಯಲ್ಲಿ ಶೇ.6.9ರಷ್ಟು ಇಳಿಕೆಯಾಗಿರುವುದನ್ನು ಈ ಅಂಕಿಅಂಶಗಳು ತೋರಿಸುತ್ತವೆ ಎಂದು ಸಚಿವರು ತಿಳಿಸಿದರು.

