ಉಪ್ಪಳ: ಕಾಳಜಿ ಮತ್ತು ಕರುಣೆ ಒಂದಾಗುವಾಗ ಸಮಾಜ ಹೆಚ್ಚು ಮಾನವೀಯವಾಗುತ್ತದೆ. ಅದಕ್ಕೆ ಸಾಕ್ಷಿಯಾಗಿ ಮಂಜೇಶ್ವರ ಬಿ.ಆರ್.ಸಿ. ವ್ಯಾಪ್ತಿಯಲ್ಲಿರುವ ಹಾಸಿಗೆ ಹಿಡಿದಿರುವ 25 ಮಕ್ಕಳಿಗೆ ಡೈಪರ್ ವಿತರಣೆ ಮಾಡಲಾಯಿತು. ಈ ವಿಶೇಷ ಆರೈಕೆ ಅಗತ್ಯವಿರುವ ಮಕ್ಕಳನ್ನು ಅಪ್ಪಿಕೊಳ್ಳಲು ಮಂಜೇಶ್ವರ ಉಪಜಿಲ್ಲಾ ಮುಖ್ಯೋಪಾಧ್ಯಾಯರ ಪೋರಂ ಮತ್ತು ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ಮುಂದಾಗಿರುವರು. ಅವರ ಸಂಯುಕ್ತ ಸಹಕಾರದಲ್ಲಿ ಆಯೋಜಿಸಿದ ಕಾರ್ಯಕ್ರಮ ಮಾನವೀಯತೆಯ ಉಜ್ವಲ ಉದಾಹರಣೆಯಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ನೆರವೇರಿಸಿದರು. ಮಂಜೇಶ್ವರ ಎಇಒ ಜಾರ್ಜ್ ಕ್ರಾಸ್ಟಾ ಸಿ.ಎಚ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರ ಪೋರಂನ ಮಾಜಿ ಸಂಯೋಜಕ ಶ್ಯಾಮ್ ಭಟ್ ಯು., ಪ್ರಸ್ತುತ ಸಂಯೋಜಕ ಸತ್ಯಪ್ರಕಾಶ್, ಸಂಯುಕ್ತ ಸಂಯೋಜಕ ಅರವಿಂದಾಕ್ಷ ಭಂಡಾರಿ, ಮುಳಿಂಜ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಹಾಗೂ ಬಿ.ರ್ ಸಿ ತರಬೇತುದಾರರಾದ ಸುಮಯ್ಯ ಪಿ ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಬಿಪಿಸಿ ರಾಜಗೋಪಾಲನ್ ಪಿ ಸ್ವಾಗತಿಸಿ, ವಿಶೇಷ ಶಿಕ್ಷಕಿ ರೀಮಾ ಪಿ. ವಂದಿಸಿದರು.

.jpg)
.jpg)
