ಕೋವೊ : ಇಬ್ಬರು ಭಾರತೀಯರನ್ನು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಇಟಲಿಯ ಇಟಲಿಯ ಕೊವೊ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಮಾತಾ ಸಾಹಿಬ್ ಕೌರ್ ಜೀ ಗುರುದ್ವಾರದ ಬಳಿ ನಡೆದಿದೆ ಎಂದು 'La Sicili' ದಿನಪತ್ರಿಕೆ ವರದಿ ಮಾಡಿದೆ. ಮೃತರನ್ನು ರಾಗಿಂದರ್ ಸಿಂಗ್ (48) ಹಾಗೂ ಗುರ್ಮೀತ್ ಸಿಂಗ್ (48) ಎಂದು ಗುರುತಿಸಲಾಗಿದೆ.
ಕೃತ್ಯದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ವೈಶಾಖಿ ಹಬ್ಬದ ಅಂಗವಾಗಿ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರ ಬರುವಾಗ ಅವರ ಮೇಲೆ ದಾಳಿ ನಡೆದಿದೆ ಎಂದು ಹೇಳಲಾಗಿದೆ.

