HEALTH TIPS

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರ ಆಯ್ಕೆ?

 ನ್ಯೂಯಾರ್ಕ್: ಜಾಗತಿಕ ಶಾಂತಿ ಹಾಗೂ ಸಹಕಾರದಲ್ಲಿ ಮಹತ್ತರ ಪಾತ್ರವಹಿಸುವ ವಿಶ್ವಸಂಸ್ಥೆಯ (UNO - United Nations Organization) ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಹಿಳೆಯೊಬ್ಬರು ಆಯ್ಕೆಯಾಗುವ ಸಂದರ್ಭ ಸನ್ನಿಹಿತವಾಗಿದೆ.


ಹೌದು ಕಳೆದ 10 ವರ್ಷಗಳಿಂದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಪೋರ್ಚುಗಲ್‌ನ ಅಂಟೋನಿಯೊ ಗುಟೇರಸ್ ಅವರ ಅಧಿಕಾರವಧಿ ಇದೇ ಏಪ್ರಿಲ್ ಅಂತ್ಯಕ್ಕೆ ಅಂತ್ಯವಾಗಲಿದೆ.

ಹೀಗಾಗಿ ಏಪ್ರಿಲ್ 21 ಹಾಗೂ 22 ರಂದು ವಿಶ್ವಸಂಸ್ಥೆಯ ಕೇಂದ್ರ ಕಚೇರಿ ನ್ಯೂಯಾರ್ಕ್‌ನಲ್ಲಿ ಚುನಾವಣೆ ನಡೆಯಲಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರಸ್ತುತ ಹೈಕಮಿಷನರ್ ಹಾಗೂ ಚಿಲಿಯ ಮಾಜಿ ಅಧ್ಯಕ್ಷೆ ಮಿಚೆಲ್ ಬ್ಯಾಚೆಲೆಟ್ ವಿಶ್ವಸಂಸ್ಥೆಯ ಅತ್ಯಂತ ಉನ್ನತ ಹುದ್ದೆಗೆ ಸ್ಪರ್ಧಿಸಿರುವ ಪ್ರಬಲ ಸ್ಪರ್ಧಿ.

ಇವರ ಜೊತೆ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನದ (UNCTAD) ಪ್ರಧಾನ ಕಾರ್ಯದರ್ಶಿ, ಕೋಸ್ಟರಿಕಾದ ಮಾಜಿ ಉಪಾಧ್ಯಕ್ಷೆ ರೆಬೆಕಾ ಗ್ರಿನ್ಸ್‌ಪಾನ್ ಅವರೂ ಸ್ಪರ್ಧಿ.

ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ರಾಫೆಲ್ ಗ್ರೋಸಿ ಮತ್ತು ಸೆನೆಗಲ್‌ನ ಮಾಜಿ ಅಧ್ಯಕ್ಷ ಮ್ಯಾಕಿ ಸಾಲ್ ಅವರೂ ಪುರುಷ ಅಭ್ಯರ್ಥಿಗಳಲ್ಲಿ ಪ್ರಬಲಿಗರು.

ಈಗಾಗಲೇ ಮಿಚೆಲ್ ಬ್ಯಾಚೆಲೆಟ್ ಅವರನ್ನು ಹಲವು ರಾಷ್ಟ್ರಗಳು ಅನುಮೋದಿಸಿದ್ದು, ಅವರೇ ಈ ಸಾರಿ ವಿಶ್ವಸಂಸ್ಥೆಯ ಪ್ರಮುಖ ಹುದ್ದೆ ಅಲಂಕರಿಸಲಿದ್ದಾರೆ ಎನ್ನಲಾಗಿದೆ.

ಹೀಗಾದರೆ 80 ವರ್ಷದ ವಿಶ್ವಸಂಸ್ಥೆಯ ಇತಿಹಾಸದಲ್ಲಿ ಮಹಿಳೆಯೊಬ್ಬರು ಮೊದಲ ಬಾರಿಗೆ ಪ್ರಧಾನ ಕಾರ್ಯದರ್ಶಿ ಆದಂತಾಗುತ್ತದೆ.

ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಶಾಂತಿ, ಭದ್ರತೆ ಮತ್ತು ಸಹಕಾರವನ್ನು ಕಾಪಾಡಲು 1945 ರಲ್ಲಿ ಸ್ಥಾಪಿಸಲಾದ ಜಾಗತಿಕ ಸಂಸ್ಥೆಯಾಗಿದೆ. ಇದು 195 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಪ್ರಧಾನ ಕಛೇರಿ ನ್ಯೂಯಾರ್ಕ್‌ನಲ್ಲಿದೆ. ಸಾಮಾನ್ಯ ಸಭೆ, ಭದ್ರತಾ ಮಂಡಳಿ, ಆರ್ಥಿಕ ಮತ್ತು ಸಾಮಾಜಿಕ ಮಂಡಳಿ, ಮತ್ತು ಅಂತರರಾಷ್ಟ್ರೀಯ ನ್ಯಾಯಾಲಯ ಎಂಬ ಪ್ರಮುಖ ಅಂಗಗಳನ್ನು ಹೊಂದಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries