ತಿರುವನಂತಪುರ: ಕೇರಳ ವಿಧಾನಸಭೆಗೆ ಏಪ್ರಿಲ್ 9ಕ್ಕೆ ಮತದಾನ ನಡೆಯಲಿದ್ದು, ಅದಕ್ಕೂ ಒಂದು ದಿನ ಮುಂಚೆ ಮಾಧ್ಯಮಗಳು ಮತ್ತು ಆನ್ಲೈನ್ ವೇದಿಕೆಗಳಲ್ಲಿ ಬರುತ್ತಿರುವ ರಾಜಕೀಯ ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಚುನಾವಣಾ ಆಯೋಗ ಬುಧವಾರ ಸೂಚಿಸಿದೆ.
ಚುನಾವಣಾ ಆಯೋಗದ ಕೇರಳ ಕಚೇರಿಯು, ಮಾಧ್ಯಮಗಳು ಮತ್ತು ಪತ್ರಕರ್ತರನ್ನು ಒಳಗೊಂಡ ಅಧಿಕೃತ ವಾಟ್ಸ್ಆಯಪ್ ಗುಂಪುಗಳಲ್ಲಿ ಈ ಸೂಚನೆಯನ್ನು ಹಾಕಿದೆ.

