ಕೆಲವು ದಿನಗಳ ಹಿಂದೆ ಚಾಟ್‌ಜಿಪಿಟಿ ತಯಾರಕರಾದ ಔಠಿeಟಿಂI ಕಂಪನಿಯು ಆಯಪಲ್ ಕಾರ್ಪ್ಲೇ ಬಳಕೆದಾರರಿಗೆ ತಮ್ಮ AI ಚಾಟ್‌ಬಾಟ್ ಲಭ್ಯವಿದೆ ಎಂದು ಘೋಷಿಸಿತ್ತು. ಹೀಗಾಗಿ ಕಾರಿನ ಡ್ಯಾಷ್‌ಬೋರ್ಡ್‌ಗೆ ಬಂದ ಮೊದಲ ಂI ಚಾಲಿತ ಸಾಧನವೆನ್ನುವ ಹಿರಿಮೆ ಗಳಿಸಿತ್ತು.
ಇದೀಗ ಗೂಗಲ್ ತನ್ನ ಕ್ಲೌಡ್ ಆಧಾರಿತ ವೀಡಿಯೋ ಕಾನ್ಫರೆನ್ಸಿಂಗ್ ಸೇವೆಯಾದ ಗೂಗಲ್ ಮೀಟ್ ಅನ್ನು ಆಯಪಲ್ ಕಾರ್ ಪ್ಲೇ ಗೆ ಲಭ್ಯವಿದೆ ಎಂದು ಘೋಷಿಸಿದೆ.
ಇದು ಪ್ರಯಾಣದಲ್ಲಿರುವಾಗ ವೃತ್ತಿಪರರು ಸಂಪರ್ಕದಲ್ಲಿರಲು ಹಾಗೂ ಚಾಲನೆ ಮಾಡುವಾಗ ಸುರಕ್ಷಿತವಾಗಿ ʼಮೀಟ್ʼಗಳಿಗೆ ಸೇರಲು ಅನುವು ಮಾಡಿಕೊಡುತ್ತದೆ.
ಬ್ಲಾಗ್ ಪೋಸ್ಟ್ ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಗೂಗಲ್ ಸಂಸ್ಥೆ, "ಅಪ್ಲಿಕೇಶನ್ ನ ಹೊಸ ಆವೃತ್ತಿಯೊಂದಿಗೆ ಬಳಕೆದಾರರು ತಮ್ಮ ಕಾರಿನ ಡ್ಯಾಷ್ ಬೋರ್ಡ್‌ನಿಂದ ನೇರವಾಗಿ ಗೂಗಲ್ ಮೀಟ್ ಪ್ರವೇಶಿಸಬಹುದು. ಮೊಬೈಲ್ ನ iಔS ಸಾಧನದಿಂದ ವಾಹನಕ್ಕೆ ಸರಾಗವಾಗಿ ಪರಿವರ್ತನೆಗೊಳ್ಳಲು ಇದು ಸಹಾಯ ಮಾಡುತ್ತದೆ" ಎಂದು ತಿಳಿಸಿದೆ.
"ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುವಾಗಲೂ ಅಥವಾ ಪ್ರಯಾಣದ ಮಧ್ಯೆಯೇ ಸಭೆ ನಡೆಸಬಹುದು. ಗೂಗಲ್ ಮೀಟ್ ಸಿಂಗಲ್ ಟ್ಯಾಪ್ ಮೂಲಕ ಬಳಕೆದಾರರನ್ನು ಸಭೆಗಳಿಗೆ ಸೇರಲು ಅವಕಾಶ ನೀಡುತ್ತದೆ. ಮುಂಬರುವ ವೇಳಾಪಟ್ಟಿಯನ್ನು ವೀಕ್ಷಿಸಲು ಹಾಗೂ ಆಡಿಯೋ ಮಾತ್ರ ಸಭೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ" ಎಂದು ಗೂಗಲ್ ಹೇಳಿದೆ.
ಗೂಗಲ್ ಮೀಟ್ ಹೋಂ ಪೇಜ್ ನಲ್ಲಿ ಎಲ್ಲಾ ಮುಂಬರುವ ಸಭೆಗಳ ವಿವರಗಳು ಕಾಣಿಸಿಕೊಳ್ಳುತ್ತವೆ. ಬಳಕೆದಾರರು ಟ್ಯಾಪ್ ಮಾಡಿ ಸೇರಬಹುದು. ಆದರೆ ಹೊಸ ಮೀಟ್ ಗಳನ್ನು ರಚಿಸುವ ಆಯ್ಕೆಗಳು ಇರುವುದಿಲ್ಲ. ನೀವು ಮೀಟ್ ನಡೆಸುತ್ತಿದ್ದರೆ, ಸ್ಕ್ರೀನ್ ಮೇಲೆ ಭಾಗವಹಿಸುವವರನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಸಾಧ್ಯವಾಗುವುದಿಲ್ಲ. ಭದ್ರತಾ ಕಾರಣಗಳಿಂದ ಕೈ ಎತ್ತುವುದು, ಪ್ರಶ್ನೋತ್ತರ ಹಾಗೂ ಸಮೀಕ್ಷೆಗಳಂತಹ ವೈಶಿಷ್ಟ್ಯಗಳು ಲಭ್ಯವಿರುವುದಿಲ್ಲ.
ಆಯಂಡ್ರಾಯ್ಡ್ ಆಟೊಮೊಬೈಲ್ ಗೂ ಗೂಗಲ್ ಮೀಟ್ ತರಲು ಗೂಗಲ್ ಸಿದ್ಧವಾಗಿದ್ದು, ಆದರೆ ಇನ್ನೂ ಯಾವುದೇ ಸಮಯವನ್ನು ನಿಗದಿಪಡಿಸಿಲ್ಲ. ಎಲ್ಲಾ ಬಳಕೆದಾರರು ಮೊಬೈಲ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡಿದ್ದರೆ ಗೂಗಲ್ ಮೀಟ್ ಸಕ್ರಿಯಗೊಳ್ಳುತ್ತದೆ. ಗೂಗಲ್ ಮೀಟ್ ಬಳಸಲು ಐಫೋನ್ ಅನ್ನು ಕಾರ್ ಪ್ಲೇ ಗೆ ಸಂಪರ್ಕಿಸಿದರೆ ಸಾಕಾಗುತ್ತದೆ.
ಆಯಪಲ್ ಕಾರ್ ಪ್ಲೇ ಗಾಗಿ ಗೂಗಲ್ ಮೀಟ್ ಎಲ್ಲಾ ಗೂಗಲ್ ವರ್ಕ್ ಸ್ಪೇಸ್ ಗ್ರಾಹಕರು, ವೈಯಕ್ತಿಕ ಚಂದಾದಾರರು ಹಾಗೂ ವೈಯಕ್ತಿಕ ಗೂಗಲ್ ಖಾತೆದಾರರಿಗೆ ಲಭ್ಯವಿರುತ್ತದೆ. ಆದರೆ ನಿಮ್ಮ ಕಾರಿನ ಡ್ಯಾಷ್ ಬೋರ್ಡ್ ನಲ್ಲಿ ಅಪ್ಲಿಕೇಶನ್ ಕಾಣಿಸಿಕೊಳ್ಳಲು ಕೆಲವು ಸಮಯ ಹಿಡಿಯಬಹುದು.

