ಬೈರೂತ್: 'ಇಸ್ರೇಲ್ ಯುದ್ಧಾಪರಾಧದಲ್ಲಿ ತೊಡಗಿದೆ' ಎಂದು ಲೆಬನಾನ್ ಅಧ್ಯಕ್ಷ ಮತ್ತು ಪ್ರಧಾನಿ ಗುರುವಾರ ಆರೋಪಿಸಿದ್ದಾರೆ.
ಇಸ್ರೇಲ್ ಪಡೆಗಳು ವಶಪಡಿಸಿಕೊಂಡಿರುವ ಲೆಬನಾನ್‌ನ ದಕ್ಷಿಣ ಭಾಗದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ದೇಶದ ಪತ್ರಕರ್ತೆಯೊಬ್ಬರು ಹತ್ಯೆಗೀಡಾದ ಬೆನ್ನಲ್ಲೇ ಈ ಆರೋಪ ಮಾಡಿದ್ದಾರೆ.
ಹತ್ಯೆಗೀಡಾದ ಅಮಲ್ ಖಲೀಲ್ ಅವರು 'ಅಲ್-ಅಕ್ಬರ್' ಎಂಬ ಲೆಬನಾನೀಸ್ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು.
'ಇಸ್ರೇಲ್ ಉದ್ದೇಶಪೂರ್ವಕವಾಗಿ ಈ ದಾಳಿ ನಡೆಸುತ್ತಿದೆ' ಎಂದು ಅಧ್ಯಕ್ಷ ಜೋಸೆಫ್ ಔನ್ ಆರೋಪಿಸಿದ್ದಾರೆ.

