ಭಾರತದಲ್ಲಿ ಅತ್ಯಂತ ವೇಗವಾಗಿ ಹೆದ್ದಾರಿ ರಸ್ತೆಗಳು ನಿರ್ಮಾಣವಾಗುತ್ತಿದೆ.
ಇರುವ ಹೆದ್ದಾರಿ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಸಚಿವ ನಿತಿನ್ ಗಡ್ಕರಿ ಕೆಲಸ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಧ್ಯಪ್ರದೇಶದ ವೀರಾಂಗಣ ದುರ್ಗವತಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಿರ್ಮಿಸಿದ ರೆಡ್ ರೋಡ್ ಇದೀಗ ಭಾರಿ ಟ್ರೆಂಡ್ ಆಗುತ್ತಿದೆ. 2025ರ ಡಿಸೆಂಬರ್ ತಿಂಗಳಲ್ಲಿ ಈ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ವನ್ಯಜೀವಿಗಳ ವಿಚಾರದಲ್ಲಿ ಹೆದ್ದಾರಿ ಪ್ರಾಧಿಕಾರದ ಪ್ರಯೋಗ ಯಶಸ್ವಿಯಾಗಿದೆ. ಇದೀಗ ಅತ್ಯಂತ ಸುಂದರ ರೆಡ್ ರೋಡ್ ಇದೀಗ ಭಾರಿ ಟ್ರೆಂಡ್ ಆಗಿದೆ.

ಮಧ್ಯಪ್ರದೇಶದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 45ರಲ್ಲಿ ಹೊಸ ತಂತ್ರಜ್ಞಾನ ಬಳಸಲಾಗಿದೆ. 11.96 ಕಿಲೋಮೀಟರ್ ಉದ್ದದ ಈ ರಸ್ತೆಯಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ವನ್ಯಜೀವಿಗಳ ಸುರಕ್ಷತೆಗೆ ಕೈಗೊಂಡ ಹೊಸ ಯೋಜನೆ ಇದೀಗ ಯಶಸ್ವಿಯಾಗಿದೆ. ಈ ಪೈಕಿ 2 ಕಿಲೋಮೀಟರ್ ರಸ್ತೆ ಕಡು ಕೆಂಪು ರಸ್ತೆ ನಿರ್ಮಾಣ ಮಾಡಲಾಗಿದೆ.

ಸ್ಪೀಡ್ ಬ್ರೇಕರ್, ಕ್ಯಾಮೆರಾ ಬಳಕೆ ಬದಲು ಟೇಬಲ್ ಟಾಪ್ ರೆಡ್ ಮಾರ್ಕಿಂಗ್ ತಂತ್ರಜ್ಞಾನ ಬಳಸಲಾಗಿದೆ. ಈ ತಂತ್ರಜ್ಞಾನದ ಮೂಲಕ ರಸ್ತೆ ಮೇಲೆ 5 ಮೀಟರ್ ದಪ್ಪದ ರೆಡ್ ಥರ್ಮೋಪ್ಲಾಸ್ಟಿಕ್ ಪದರ ಹಾಕಲಾಗಿದೆ. ಮೊದಲೇ ಕಡು ಕೆಂಪು ಬಣ್ಣದ ಕಾರಣ ಚಾಲಕ ಕೊಂಚ ಜಾಗರೂಕರಾಗುತ್ತಾರೆ. ಇನ್ನು ಈ ಥರ್ಮೋಪ್ಲಾಸ್ಟಿಕ್ ಪದರ ವಾಹನದ ವೇಗ ಕಡಿತಕಗೊಳಿಸುತ್ತದೆ. ಸಣ್ಣ ಕಂಪನ ಈ ರಸ್ತೆ ಮೇಲೆ ಹೋಗುವಂತೆ ಮಾಡಲಿದೆ.

ಹುಲಿ ಸರಂಕ್ಷಿತ ಪ್ರದೇಶದಲ್ಲಿ ಸುಮಾರು 25 ಅಂಡರ್ ಪಾಸ್ ನೀಡಲಾಗಿದೆ. ಇದು ಪ್ರಾಣಿಗಳು ಸರಾಗವಾಗಿ ಓಡಾಡಲು ಸಾಧ್ಯವಾಗಲಿದೆ. ಇದರ ಜೊತೆಗೆ ಪ್ರಾಣಿಗಳು ರಸ್ತೇ ಮೇಲಿಂದ ದಾಟುವ ಸಾಹಸ ಮಾಡಿದಾಗ ವಾಹನ ಅಪಘಾತವಾಗಿ ಸಾವನ್ನಪ್ಪು ಸಾಧ್ಯತೆ ಹೆಚ್ಚು. ಹೀಗಾಗಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ರೆಡ್ ರಸ್ತೆಯಲ್ಲಿ ವಾಹನಗಳು ಸಹಜವಾಗಿ ನಿಧಾನವಾಗಿ ಸಾಗಲಿದೆ. ಇದರಿಂದ ಪ್ರಾಣಿಗಳು ಸಾವನ್ನಪ್ಪುವ ಪ್ರಮಾಣ ತಗ್ಗಲಿದೆ.

ರೆಡ್ ರೋಡ್ ತಂತ್ರಜ್ಞಾನ ಸ್ಪೀಡ್ ಬ್ರೇಕರ್ಗಿಂತ ಹೆಚ್ಚು ಉಪಯುಕ್ತವಾಗಿದೆ. ಜೊತೆಗೆ ಪ್ರಾಣಿಗಳು ನೇರವಾಗಿ ರಸ್ತೆಗೆ ಬರದಂತೆ ತಡೆಗೋಡೆ ನಿರ್ಮಿಸಲಾಗಿದೆ. ಸೌರವಿದ್ಯುತ್ ಚಾಲಿತ ದೀಪಗಳು, ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲಾಗಿದೆ.

