HEALTH TIPS

ಅಮೆರಿಕ ಪತ್ರಕರ್ತೆ ಶೆಲ್ಲಿ ಕಿಟೆಲ್ಸನ್ ಇರಾಕ್ ನಲ್ಲಿ ಅಪಹರಣ

 ಬಾಗ್ದಾದ್: ಅಮೆರಿಕದ ಹವ್ಯಾಸಿ ಪತ್ರಕರ್ತೆ ಶೆಲ್ಲಿ ಕಿಟೆಲ್ಸನ್ ಅವರನ್ನು ಬಾಗ್ದಾದ್ ನಲ್ಲಿ ಅಪರಿಚಿತರು ಅಪಹರಣ ಮಾಡಿದ್ದಾರೆ ಎಂದು ಇರಾಕ್ ನ ರಕ್ಷಣಾ ಸಚಿವಾಲಯ ಪ್ರಕಟಿಸಿದೆ. ಅಪಹರಣಕಾರರನ್ನು ಪತ್ತೆ ಮಾಡಲು ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.


"ನಿಖರವಾದ ಗುಪ್ತಚರ ಮಾಹಿತಿಗಳು ಮತ್ತು ತೀವ್ರ ಕ್ಷೇತ್ರ ಕಾರ್ಯಾಚರಣೆಯ" ಆಧಾರದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಇರಾಕ್ ನ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅಪಹರಣಕಾರರ ವಾಹನ ಮಗುಚಿ ಬಿದ್ದಿದೆ ಎಂದು ಎಪಿ ವರದಿ ಮಾಡಿದೆ.

ಅಪಹರಣಕ್ಕೀಡಾದ ಪತ್ರಕರ್ತೆಯ ಗುರುತನ್ನು ರಕ್ಷಣಾ ಸಚಿವಾಲಯ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ಮಂಗಳವಾರ ಸಂಜೆ ಅಪಹರಣ ನಡೆದಿರುವುದನ್ನು ದೃಢಪಡಿಸಿದೆ. ಯಾವ ಸ್ಥಳದಿಂದ ಅಪಹರಣವಾಗಿದೆ ಎಂದು ಸ್ಪಷ್ಟಪಡಿಸಿಲ್ಲ. ಆದಾಗ್ಯೂ ಬಾಗ್ದಾದ್ ನಿಂದ ಅಪಹರಣ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಪಹೃತ ಪತ್ರಕರ್ತೆ ಶೆಲ್ಲಿ ಕಿಟೆಲ್ಸನ್ ಎಂದು ಸ್ಥಳೀಯ ಮಾಧ್ಯಮಗಳು ಗುರುತಿಸಿವೆ. ಇವರು ಅಮೆರಿಕದ ಪಾಸ್ಪೋರ್ಟ್ ಹೊಂದಿದ್ದು, ಪ್ರಶಸ್ತಿ ವಿಜೇತ ಪತ್ರಕರ್ತೆ. ಪತ್ರಕರ್ತೆಯನ್ನು ಮುಕ್ತಗೊಳಿಸಲು ಪ್ರಯತ್ನಗಳು ನಡೆದಿವೆ ಎಂದು ಅಧಿಕೃತ ಮೂಲಗಳು ಹೇಳಿವೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries