HEALTH TIPS

ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ: ಸಿದ್ಧತಾ ಸಭೆ

ಕಾಸರಗೋಡು: ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಏ.18 ರಿಂದ 23ರ ವರೆಗೆ ಜರಗಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವವು ಜರಗಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಿದ್ಧತಾ ಸಭೆ ಭಾನುವಾರ ಸಂಜೆ ಶ್ರೀ ಕ್ಷೇತ್ರ ಪರಿಸರದಲ್ಲಿ ಜರಗಿತು. ಸಭೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಬಾಲಕೃಷ್ಣನ್ ಚೆನ್ನಿಕೆರೆ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದ್ದರು. 

ಶ್ರೀ ಕ್ಷೇತ್ರ ಟ್ರಸ್ಟಿ ಅಧ್ಯಕ್ಷ ಗಣೇಶ್ ಅಮೈ ಅವರು ಮಾತನಾಡಿ, ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. 


ಬ್ರಹ್ಮಕಲಶೋತ್ಸವ ಸಮಿತಿ ಕೋಶಾ„ಕಾರಿ ದೇವದಾಸ್ ನುಳ್ಳಿಪ್ಪಾಡಿ ಮಾತನಾಡಿ, ವಿವಿಧ ಸಮಿತಿಗಳು ಕೈಗೊಳ್ಳಬೇಕಾದ ವ್ಯವಸ್ಥೆಗಳ ಕುರಿತು ಹಾಗೂ ಜವಾಬ್ದಾರಿಗಳ ಕುರಿತು ತಿಳಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ರಾಮನ್ ಚೆನ್ನಿಕೆರೆ, ಆಹಾರ ಸಮಿತಿಯ ರವೀಂದ್ರ ಕೋಟೆಕಣಿ, ಉಗ್ರಾಣ ಸಮಿತಿ ಅಧ್ಯಕ್ಷ ಗಣೇಶ ಕೆ.ಅರ್., ಭಜನಾ ಸಮಿತಿಯ ಕನ್ವೀನರ್ ಪ್ರವೀಣ್ ಎನ್., ಚಪ್ಪರ ಸಮಿತಿ ಅಧ್ಯಕ್ಷ ಸುನಿಲ್ ಚೆನ್ನಿಕೆರೆ,  ಸಾಂಸ್ಕøತಿಕ ಸಮಿತಿ ಅಧ್ಯಕ್ಷ ರಾಘವೇಂದ್ರ ಕೆ.ವಿ., ಆರ್ಥಿಕ ಸಮಿತಿ ಅಧ್ಯಕ್ಷ ವರಪ್ರಸಾದ್ ಕೋಟೆಕಣಿ, ವೈದಿಕ ಸಮಿತಿ ಅಧ್ಯಕ್ಷ ನಾರಾಯಣ ಗುರುಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ, ಮಹಿಳಾ ಸಮಿತಿ ಅಧ್ಯಕ್ಷೆ ಶೋಭಾ ಅರವಿಂದ ನಾಯ್ಕ್ ಮೊದಲಾದವರು ಮಾತನಾಡಿದರು. 

ಜಯರಾಮ ನುಳ್ಳಿಪ್ಪಾಡಿ, ಲೋಕೇಶ್ ಶೆಟ್ಟಿ, ಸಂತೋಷ್ ಭಂಡಾರಿ, ಮಹಾದೇವ, ಲೋಕೇಶ್ ಅಣಂಗೂರು, ದಿನೇಶ್ ಅಣಂಗೂರು, ಜಗದೀಶ ಅಣಂಗೂರು, ಕಿಶೋರ್ ನುಳ್ಳಿಪ್ಪಾಡಿ, ಶಶಿಕಾಂತ್ ಶೆಟ್ಟಿ,ಮೊದಲಾದವರು ಉಪಸ್ಥಿತರಿದ್ದರು.

ಹರೀಶ್ ಕೋಟೆಕಣಿ ಸ್ವಾಗತಿಸಿ, ಸಂಜಯ್ ಕೋಟೆಕಣಿ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries