HEALTH TIPS

ಮಹಿಳಾ ಮೀಸಲಾತಿ: ಪ್ರಧಾನಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ; ರಾಹುಲ್ ಪತ್ರದ ನೆನಪು

 ನವದೆಹಲಿ: ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್‌ವಿಂಗಡಣೆಯೊಂದಿಗೆ ಜೋಡಿಸುವ ಮೂಲಕ ಮೀಸಲಾತಿಯನ್ನು ವಿಳಂಬಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಉತ್ಸುಕರಾಗಿದ್ದಾರೆ ಎಂದು ಮಂಗಳವಾರ ಕಾಂಗ್ರೆಸ್‌ ಆರೋಪಿಸಿದೆ.


ಇದೇ ವೇಳೆ, 2018ರಲ್ಲಿ ರಾಹುಲ್ ಗಾಂಧಿ ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರುವಂತೆ ಕೋರಿ ಪ್ರಧಾನಿಯವರಿಗೆ ಬರೆದಿದ್ದ ಪತ್ರವನ್ನು ಪಕ್ಷ ಉಲ್ಲೇಖಿಸಿದೆ.

ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ 2018ರ ಜುಲೈ 16ರಂದು ಪ್ರಧಾನಿಯವರಿಗೆ ಪತ್ರ ಬರೆದು ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೊಳಿಸುವಂತೆ ಒತ್ತಾಯಿಸಿದ್ದರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದರು.

ಎಂಟು ವರ್ಷಗಳ ನಂತರವೂ, ಕ್ಷೇತ್ರ ಮರುವಿಂಗಡಣೆಯನ್ನು ನೆಪಮಾಡಿಕೊಂಡು ಮೀಸಲಾತಿ ಜಾರಿಯನ್ನು ವಿಳಂಬವಾಗಿಸಲು ಪ್ರಧಾನಿ ಪ್ರಯತ್ನಿಸುತ್ತಿದ್ದಾರೆ. ಮೀಸಲಾತಿ ಕುರಿತಂತೆ ಅವರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಮೇಶ್ ಟೀಕಿಸಿದ್ದಾರೆ.

ರಮೇಶ್ ಅವರು ಹಂಚಿಕೊಂಡಿರುವ 2018ರ ಪತ್ರದಲ್ಲಿ, ರಾಹುಲ್ ಗಾಂಧಿಯವರು ಅಂದಿನ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಬೆಂಬಲ ನೀಡುವಂತೆ ಮನವಿ ಮಾಡಿದ್ದರು.

ಪತ್ರದಲ್ಲಿರುವ ಪ್ರಮುಖ ಅಂಶಗಳು ಇಲ್ಲಿವೆ...

2010ರ ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಎಂಟು ವರ್ಷಗಳಿಂದ ಬಾಕಿ ಉಳಿದಿದೆ.

ರಾಜ್ಯಸಭೆಯಲ್ಲಿ ಈ ಮಸೂದೆಗೆ ಬಿಜೆಪಿ ಬೆಂಬಲ ನೀಡಿದ್ದಾಗ, ಅಂದಿನ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿಯವರು ಇದನ್ನು 'ಐತಿಹಾಸಿಕ' ಎಂದು ಕರೆದಿದ್ದರು. ಆದರೆ, 2014ರ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರೂ ಬಿಜೆಪಿ ಜಾರಿಗೆ ತರಲು ಹಿಂದೇಟು ಹಾಕುತ್ತಿದೆ.

ಮಹಿಳಾ ಮೀಸಲಾತಿಯನ್ನು ನೀವು ರಾಜಕೀಯ ಮೀರಿ ಬೆಂಬಲಿಸಬೇಕು, ನಿಮ್ಮ ಭಾಷಣಗಳಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತೀರಿ. ಈ ಮಸೂದೆಗೆ ಬೇಷರತ್ ಬೆಂಬಲ ನೀಡುವ ಮೂಲಕ ಅದನ್ನು ಸಾಬೀತುಪಡಿಸಲು ಇದಕ್ಕಿಂತ ಉತ್ತಮ ಸಮಯವಿಲ್ಲ

ಮಹಿಳಾ ಮೀಸಲಾತಿ ಹೆಸರಿನಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಲು ಹೊರಟ ಮೋದಿ ಸರ್ಕಾರದ ಪ್ರಯತ್ನಕ್ಕೆ ಸೋಲಾಗಿದ್ದು, ಇದು ಬುಲ್ಡೋಜರ್ ರಾಜಕೀಯಕ್ಕೆ ಸಂದ ಜಯ ಎಂದು ಕಾಂಗ್ರೆಸ್ ಸೋಮವಾರ ಲೇವಡಿ ಮಾಡಿತ್ತು.

ಕೇಂದ್ರ ಸರ್ಕಾರದ ಅಜೆಂಡಾ 'ಮಹಿಳಾ ಮೀಸಲಾತಿ' ಅಲ್ಲ, ಬದಲಿಗೆ 'ಪ್ರಧಾನಿ ಮೋದಿ ರಕ್ಷಣೆ' ಎಂದು ಕಾಂಗ್ರೆಸ್‌ ಟೀಕೆ ಮಾಡಿದೆ.

ಅಸ್ತಿತ್ವದಲ್ಲಿರುವ ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿ ತಕ್ಷಣವೇ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಕಾಂಗ್ರೆಸ್‌ ಪಕ್ಷ ಒತ್ತಾಯಿಸಿದೆ.

ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 816ಕ್ಕೆ ಹೆಚ್ಚಿಸುವ ಮತ್ತು ಮಹಿಳಾ ಮೀಸಲಾತಿ ಜಾರಿಗೆ ತರುವ ಸರ್ಕಾರದ ತಿದ್ದುಪಡಿ ಮಸೂದೆಗೆ ಕಳೆದ ಶುಕ್ರವಾರ ಸೋಲಾದ ಬೆನ್ನಲ್ಲೇ ಕಾಂಗ್ರೆಸ್ ಹೇಳಿಕೆಗಳನ್ನು ನೀಡಿದೆ.

ಮಸೂದೆಯ ಪರವಾಗಿ 298 ಸದಸ್ಯರು ಮತ ಚಲಾಯಿಸಿದರೆ, 230 ಸಂಸದರು ವಿರುದ್ಧವಾಗಿ ಮತ ಹಾಕಿದ್ದರು.

2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ನಡೆಸಿ, 2029ರ ಸಂಸತ್ ಚುನಾವಣೆಗೆ ಮೊದಲು ಲೋಕಸಭಾ ಸ್ಥಾನಗಳನ್ನು 543 ರಿಂದ 816ಕ್ಕೆ ಹೆಚ್ಚಿಸಿ, ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಲು ಸರ್ಕಾರ ಈ ಮಸೂದೆಯನ್ನು ಮಂಡಿಸಿತ್ತು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries