HEALTH TIPS

ಯುದ್ಧ ನಿಂತರೂ ತೈಲ ದರ ತಕ್ಷಣ ಕಡಿಮೆಯಾಗದು: ಇಂಧನ ಆಯುಕ್ತರ ಎಚ್ಚರಿಕೆ

ನಿಕೊಸಿಯ: ಇರಾನ್‌ ಯುದ್ಧದ ಪರಿಣಾಮವಾಗಿ ಯುರೋಪ್‌ನಲ್ಲಿ ಗಗನಕ್ಕೇರಿರುವ ತೈಲ ಮತ್ತು ಇಂಧನ ದರವು ಯುದ್ಧ ಕೊನೆಗೊಂಡರು ಕೂಡ ತಕ್ಷಣವೇ ಸಹಜ ಸ್ಥಿತಿಗೆ ಮರಳುವುದಿಲ್ಲ ಎಂದು ಐರೋಪ್ಯ ಒಕ್ಕೂಟದ ಇಂಧನ ಆಯುಕ್ತರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

'ಒಕ್ಕೂಟದ 27 ರಾಷ್ಟ್ರಗಳಲ್ಲಿ ಸದ್ಯ ತೈಲ ಮತ್ತು ಅನಿಲ ಪೂರೈಕೆಯಲ್ಲಿ ಅಭಾವವಿಲ್ಲದಿದ್ದರೂ, ಡೀಸೆಲ್ ಮತ್ತು ಜೆಟ್‌ ಇಂಧನ ಪೂರೈಕೆ ಮೇಲೆ ಒತ್ತಡವಿದೆ.

ಜಾಗತಿಕ ಅನಿಲ ಮಾರುಕಟ್ಟೆಗಳಲ್ಲಿ 'ಹೆಚ್ಚುತ್ತಿರುವ ನಿರ್ಬಂಧಗಳು' ವಿದ್ಯುತ್‌ ದರ ಹೆಚ್ಚಳಕ್ಕೆ ಕಾರಣವಾಗುತ್ತಿದೆ' ಎಂದು ಆಯುಕ್ತ ಡಾನ್‌ ಜೋರ್ಗೆನ್ಸನ್‌ ಅವರು ತಿಳಿಸಿದರು.

'ಯುರೋಪ್‌ನಲ್ಲಿ ಅನಿಲಗಳ ಬೆಲೆಯಲ್ಲಿ ಸುಮಾರು ಶೇ 70ರಷ್ಟು ಮತ್ತು ತೈಲ ಬೆಲೆಯಲ್ಲಿ ಶೇ 60ರಷ್ಟು ಏರಿಕೆಯಾಗಿದೆ. ಇದನ್ನು ನಿಭಾಯಿಸಲು ಅನುಕೂಲವಾಗುವ ಕ್ರಮಗಳನ್ನು ಐರೋಪ್ಯ ಒಕ್ಕೂಟ ಕಾರ್ಯನಿರ್ವಾಹಕ ವಿಭಾಗವು ಸಿದ್ಧಪಡಿಸುತ್ತಿದೆ' ಎಂದು ಅವರು ಹೇಳಿದರು.

ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸ್ ಅವರೂ ಇದೇ ರೀತಿಯ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries