HEALTH TIPS

ಪಾಕಿಸ್ತಾನದ ವಿದೇಶಾಂಗ ಸಚಿವರಿಗೆ ಇರಾನ್ ಫೋನ್ ಕರೆ: ಮುಂದಿನ ವಾರ ಇರಾನ್-ಅಮೆರಿಕ ಮಾತುಕತೆ ಸಾಧ್ಯತೆ; ವರದಿ

 ಇಸ್ಲಮಾಬಾದ್: ಪಾಕಿಸ್ತಾನದ ವಿದೇಶಾಂಗ ಸಚಿವರ ಜೊತೆ ಶುಕ್ರವಾರ ಇರಾನ್‍ನ ವಿದೇಶಾಂಗ ಸಚಿವರು ದೂರವಾಣಿಯ ಮೂಲಕ ಮಾತುಕತೆ ನಡೆಸಿದ್ದು ಮುಂದಿನ ವಾರದಲ್ಲಿ ಇರಾನ್-ಅಮೆರಿಕ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಯ ನಿರೀಕ್ಷೆಯನ್ನು ಹೆಚ್ಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.


ಪಾಕ್ ವಿದೇಶಾಂಗ ಸಚಿವ ಇಷಾಕ್ ದಾರ್ ಹಾಗೂ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಫೋನ್‍ನಲ್ಲಿ ನಡೆಸಿದ ಮಾತುಕತೆ ಸಂದರ್ಭ ಪ್ರಾದೇಶಿಕ ಬೆಳವಣಿಗೆ ಹಾಗೂ ಅಮೆರಿಕ-ಇರಾನ್ ಕದನ ವಿರಾಮದ ಬಗ್ಗೆ ಅಭಿಪ್ರಾಯ ವಿನಿಮಯ ನಡೆದಿದೆ. ಅರಾಘ್ಚಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಜೊತೆಗೂ ಮಾತುಕತೆ ನಡೆಸಿರುವುದಾಗಿ ಇರಾನ್‍ನ ಮಾಧ್ಯಮಗಳು ವರದಿ ಮಾಡಿವೆ.

ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸಲು ನಿರಂತರ ಮಾತುಕತೆ ಮತ್ತು ಸಂವಹನದ ಅಗತ್ಯವನ್ನು ದಾರ್ ಒತ್ತಿಹೇಳಿದರು. ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಸ್ಥಿರ ಮತ್ತು ರಚನಾತ್ಮಕ ಪಾತ್ರವನ್ನು ಅರಾಘ್ಚಿ ಶ್ಲಾಘಿಸಿದರು ಮತ್ತು ಎರಡೂ ಕಡೆಯವರು ನಿಕಟ ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

ಈ ಮಧ್ಯೆ, ಇರಾನ್‍ನ ನಿಯೋಗ ಶುಕ್ರವಾರ ರಾತ್ರಿ ಇಸ್ಲಮಾಬಾದ್‍ಗೆ ಬಂದಿಳಿಯುವ ಸಾಧ್ಯತೆಯಿದೆ. ರವಿವಾರದೊಳಗೆ ಅಮೆರಿಕದ ನಿಯೋಗವೂ ಬರುವ ನಿರೀಕ್ಷೆಯಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಇಸ್ಲಮಾಬಾದ್‍ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಸಿಎನ್‍ಎನ್-ನ್ಯೂಸ್18 ವರದಿ ಮಾಡಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries