ಪಾಟ್ನಾ: ಬಿಹಾರದ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಳಾಗಿ ಹಲವಾರು ಬಿಜೆಪಿ ನಾಯಕರ ಹೆಸರುಗಳು ಕೇಳಿಬರುತ್ತಿರುವುದರದ ನಡುವೆ ಶನಿವಾರ ಪಾಟ್ನಾದ ಜೆಡಿ(ಯು) ಕಚೇರಿ ಬಳಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರೇ ಮುಂದಿನ ಸಿಎಂ ಎಂದು ಬಿಂಬಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
ಈ ಪೋಸ್ಟರ್‌ಗಳಲ್ಲಿ ನಿತೀಶ್ ಕುಮಾರ್ ಅವರು ಪ್ರಮುಖವಾಗಿ ಕಾಣಿಸಿಕೊಂಡಿದ್ದರೂ, ನಿಶಾಂತ್ ಅವರನ್ನು "ಬಿಹಾರದ ಮುಂದಿನ ಸಿಎಂ" ಎಂದು ಬಿಂಬಿಸಲಾಗಿದೆ. ಜೆಡಿ(ಯು) ಕಾರ್ಯಕರ್ತರು "ಅಭಿವೃದ್ಧಿ ಹೊಂದಿದ ಬಿಹಾರ-2040"ಗಾಗಿ ಒಂದು ದೃಷ್ಟಿಕೋನವನ್ನು ಈ ಪೋಸ್ಟರ್‌ಗಳಲ್ಲಿ ಪ್ರಸ್ತುತಪಡಿಸಿದ್ದಾರೆ.
ಪೋಸ್ಟರ್‌ಗಳಲ್ಲಿ "ನಿಶಾಂತ್ ಅವರು ನಿತೀಶ್ ಕುಮಾರ್ ಅವರ ಪ್ರತಿಜ್ಞೆಯನ್ನು ಪೂರೈಸಲು ಸಿದ್ಧರಾಗಿರುವಾಗ ಹೊಸ ಮುಖವನ್ನು ಏಕೆ ಪರಿಗಣಿಸಬೇಕು" ಎಂಬಂತಹ ಘೋಷಣೆಗಳಿವೆ.

