ಕಾಸರಗೋಡು: ರೈಲ್ವೆ ಚೆನ್ನೈ ವಿಭಾಗದ ಮಹಾ ಪ್ರಬಂಧಕ ಆರ್.ಎನ್. ಸಿಂಗ್ ನೇತೃತ್ವದ ತಂಡ ಕಾಸರಗೋಡು ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಕೆಲಸ ಕಾರ್ಯಗಳ ಅವಲೋಕನ ನಡೆಸಿದರು. ಅಮೃತ ಭಾರತ ರೈಲ್ವೆ ನವೀಕರಣದ ಅಂಗವಾಗಿ ಕಾಸರಗೋಡು ರೈಲ್ವೆ ನಿಲ್ದಾಣ ವಠಾರದಲ್ಲಿ ನಡೆಸಲಾಗಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಪರಿಶೀಲನೆ ನಡೆಸಲಾಯಿತು.
ಚೆನ್ನೈ ವಿಭಾಗ ಡಿಆರ್‍ಎಂ ಮಧುಕರ್ ರಾವತ್, ಹಿರಿಯ ವ್ಯವಸ್ಥಾಪಕ ಮನೋಜ್ ಕುಮಾರ್, ಅರುಣ್ ಥಾಮಸ್, ಎಡಿಆರ್ ಎಂ.ಜಯಕೃಷ್ಣನ್, ಕೆ.ಮೋಲಿ, ಕಾಸರಗೋಡು ರೈಲ್ವೆ ಪ್ರಯಾಣಿಕರ ಸಂಘದ ಅಧ್ಯಕ್ಷ ಆರ್.ಪ್ರಶಾಂತ್ ಕುಮಾರ್, ಮಜೀದ್ ಚೆರ್ಕಳ, ಅಬ್ದುಲ್ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.

