ಡೆಹ್ರಾಡೂನ್ : ಉತ್ತರಾಖಂಡದ ಕಾಳಿಂಗ ಸರ್ಪದ ಜೀವನವನ್ನು ಸೆರೆ ಹಿಡಿದಿರುವ ಸಾಕ್ಷ್ಯಚಿತ್ರವೊಂದು ಜರ್ಮನಿಯಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ಪ್ರಸಿದ್ದ ''ಗ್ರೀನ್ ಸ್ಕ್ರೀನ್'' ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ.
ಇದು ಭಾರತೀಯ ವನ್ಯಜೀವಿ ಸಿನೆಮಾಗಳಲ್ಲಿ ಒಂದು ಐತಿಹಾಸಿಕ ಸಾಧನೆಯಾಗಿದೆ.
''ದಿ ಡಿವೈನ್ ಮದರ್'' ಶೀರ್ಷಿಕೆಯ ಈ ಸಾಕ್ಷ್ಯಚಿತ್ರ ಈ ವರ್ಷ ಸೆಪ್ಟಂಬರ್ 9ರಿಂದ 13ರವರೆಗೆ ಪ್ರದರ್ಶನಗೊಳ್ಳಲಿದೆ. ಇದು ಉತ್ತರಾಖಂಡದ ಜೀವ ವೈವಿಧ್ಯವನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡಿದೆ.
ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕ ಮತ್ತು ಪದ್ಮಶ್ರೀ ಪುರಸ್ಕೃತ ಅನೂಪ್ ಸಾಹ್ ಅವರು ಪರಿಸರವಾದಿ ಪಾರ್ಥ್ ಶರ್ಮಾ ಅವರೊಂದಿಗೆ ಸೇರಿ ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಾರೆ. ಅಜಯ್ ಸೂರಿ ನಿರ್ದೇಶಿಸಿದ್ದಾರೆ.

