HEALTH TIPS

ನಾವು ಕಡಲ್ಗಳ್ಳರಿದ್ದಂತೆ: ಇರಾನ್‌ ತೈಲ ಟ್ಯಾಂಕರ್‌ ವಶಪಡಿಸಿಕೊಂಡ ಬಗ್ಗೆ ಟ್ರಂಪ್

ವಾಷಿಂಗ್ಟನ್: ಹೊರ್ಮುಜ್ ಜಲಸಂಧಿ ಬಳಿಯ ಕಡಲಲ್ಲಿ ನಮ್ಮ ನೌಕಾಪಡೆಯು ಕಡಲ್ಗಳ್ಳರಂತೆ ವರ್ತಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್‌ನ ಬಂದರುಗಳ ಮೇಲೆ ಹೇರಿರುವ ದಿಗ್ಬಂಧನದ ನಡುವೆ ಹಡಗುಗಳನ್ನು ಹೇಗೆ ವಶಪಡಿಸಿಕೊಳ್ಳುತ್ತಿದ್ದೇವೆ ಎಂಬುದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

'ಹೊರ್ಮುಜ್ ದಾಟುವ ಹಡಗುಗಳು, ಅದರೊಳಗಿನ ತೈಲ, ಇತರೆ ಸರಕುಗಳನ್ನು ವಶಪಡಿಸಿಕೊಂಡಿದ್ದೇವೆ. ಇದು ತುಂಬಾ ಲಾಭದಾಯಕ ವ್ಯವಹಾರವಾಗಿದೆ'ಎಂದು ಟ್ರಂಪ್ ಶನಿವಾರ ಫ್ಲೋರಿಡಾದಲ್ಲಿ ನಡೆದ ರ್‍ಯಾಲಿಯನ್ನು ಉದ್ದೇಶಿಸಿ ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಈ ಸಂದರ್ಭ ನೆರೆದಿದ್ದ ಜನಸಮೂಹವು ಹರ್ಷೋದ್ಗಾರ ಮಾಡುತ್ತಿದ್ದಂತೆ, 'ನಾವು ಒಂದು ರೀತಿಯ ಕಡಲ್ಗಳ್ಳರಂತೆ. ಆದರೆ, ನಾವು ಯಾವುದೇ ಆಟ ಆಡುತ್ತಿಲ್ಲ'ಎಂದಿದ್ದಾರೆ.

ಅಮೆರಿಕದ ಈ ಕೃತ್ಯವನ್ನು ಇರಾನ್ ಸಶಸ್ತ್ರ ದರೋಡೆ ಎಂದು ಕರೆದಿದೆ

ಅಮೆರಿಕ ಪಡೆಗಳು ಇರಾನ್‌ನ ಕಚ್ಚಾ ತೈಲ ಸಾಗಿಸುತ್ತಿದ್ದ ಎರಡು ಟ್ಯಾಂಕರ್‌ಗಳನ್ನು ವಾಕ್ಕೆ ಪಡೆದ ನಂತರ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕದ ಈ ಕ್ರಮವು ಸಮುದ್ರದ ಸಶಸ್ತ್ರ ದರೋಡೆ ಎಂದು ಕರೆದಿದೆ. ಅಮೆರಿಕವು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದೆ.

ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಅವರು, ಈ ಕಾರ್ಯಾಚರಣೆಯು ಕಡಲ್ಗಳ್ಳತನವನ್ನು ಪರಿಣಾಮಕಾರಿಯಾಗಿ ಅನುಮೋದಿಸಿದೆ ಎಂದು ಹೇಳಿದ್ದಾರೆ.

'ಇದು ಸಮುದ್ರಗಳಲ್ಲಿ ಕಡಲ್ಗಳ್ಳತನ ಮತ್ತು ಸಶಸ್ತ್ರ ದರೋಡೆಯನ್ನು ಸಂಪೂರ್ಣವಾಗಿ ಕಾನೂನುಬದ್ಧಗೊಳಿಸುವುದಾಗಿದೆ' ಎಂದಿದ್ದಾರೆ.

ಜಗತ್ತು ಕಡಲ್ಗಳ್ಳರ ಮರಳುವಿಕೆಯನ್ನು ನೋಡುತ್ತಿದೆ ಎಂದಿದ್ದಾರೆ.

ಇರಾನ್ ಪರಮಾಣು ಬದಿಗಿಟ್ಟು ಯುದ್ಧ ವಿರಾಮ ಒಪ್ಪಂದಕ್ಕೆ ಬರುವರರೆಗೂ ಅಲ್ಲಿನ ಬಂದರುಗಳಿಂದ ಹೊರಡುವ ಹಡಗುಗಳಿಗೆ ತಡೆ ಹಾಕುವುದಾಗಿ ಅಮೆರಿಕ ಹೇಳಿದೆ. ಆದರೆ, ಇರಾನ್ ತನ್ನ ನಿಲುವನ್ನು ಬದಲಿಸಿಲ್ಲ. ಪರಮಾಣು ಕಾರ್ಯಕ್ರಮವನ್ನು ಬಿಡುವುದಿಲ್ಲ ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries