ಮಧೂರು : ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ 49 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿSIಆ ಪ್ರಬಂಧಕ ಬಿ. ಎನ್. ಸುಬ್ರಹ್ಮಣ್ಯ ರಂಗಾಭಟ್ 2026 ಮೇ 31 ರಂದು ನಿವೃತ್ತರಾಗಲಿರುವರು. 1977ರಲ್ಲಿ ಉದ್ಯೋಗಕ್ಕೆ ಸೇರಿದ ಅವರು ಪದೋನ್ನತಿ ಪಡೆದು ಪ್ರಬಂಧಕರಾಗಿ ಸ್ತುತ್ಯರ್ಹ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರು ಕರ್ತವ್ಯನಿರತರಾಗಿದ್ದಾಗಲೇ ಮಧೂರಿನಲ್ಲಿ ಎರಡು ಬಾರಿ ನಡೆದ ಮೂಡಪ್ಪ ಸೇವಾ ಮಹೋತ್ಸವ, ಬ್ರಹ್ಮಕಲಶೋತ್ಸವ, ಮಹಾರುದ್ರಯಾಗ, ಋಕ್‍ಸಂಹಿತಾ ಯಜ್ಞ, ಸಹಸ್ರನಾಳಿಕೇರ ಗಣಯಾಗ, ವಾರ್ಷಿಕ ಉತ್ಸವಗಳು ನಡೆದಿವೆ. ದೇವಸ್ಥಾನದ ಅಭಿವೃದ್ಧಿಗಾಗಿ ಸಹೋದ್ಯೋಗಿಗಳ ಹಾಗೂ ಅಧಿಕಾರಿಗಳ ಜೊತೆ ಮಾತ್ರವಲ್ಲದೆ ವಿವಿಧ ಸಮಿತಿಗಳೊಂದಿಗೆ ಸಹಕರಿಸುತ್ತಾ ಬಂದಿದ್ದಾರೆ.
ಮಧೂರಿನ ದಿ. ನಾರಾಯಣ ರಂಗಾಭಟ್ ಸಾವಿತ್ರಿ ಅಮ್ಮ ದಂಪತಿ ಪುತ್ರನಾಗಿ 1961ರಲ್ಲಿ ಜನಿಸಿದ ಬಿ. ಎನ್. ಸುಬ್ರಹ್ಮಣ್ಯ ರಂಗಾಭಟ್ ಸುದೀರ್ಘಕಾಲ ಮಧೂರಿನಲ್ಲಿಯೇ ನೆಲೆಸಿದ್ದರು. ಕೆಲವು ವರ್ಷಗಳಿಂದ ಉಳಿಯಕ್ಕೆ ವಾಸ್ತವ್ಯವನ್ನು ಬದಲಾಯಿಸಿದ್ದಾರೆ. ಜನಸೇವೆಯೇ ಜನಾರ್ದನ ಸೇವೆಯೆಂದು ನಂಬಿರುವ ಅವರು ದಕ್ಷ ಅಧಿಕಾರಿಯಾಗಿ ಹೆಸರು ಗಳಿಸಿದ್ದಾರಲ್ಲದೆ ಭಕ್ತಜನ ಸಂಪ್ರೀತ ವ್ಯಕ್ತಿಯಾಗಿ ಸರ್ವಾದರಣೀಯರಾಗಿದ್ದಾರೆ. ಸೇವೆಯಿಂದ ನಿವೃತ್ತರಾಗುವ ಸಂದರ್ಭದಲ್ಲಿ ಅವರಿಗೆ ಆತ್ಮೀಯರು ವಿದಾಯ ಕೋರಿದ್ದಾರೆ. ಭಾವೀ ಜೀವನಕ್ಕೆ ಶುಭ ಹಾರೈಸಿದ್ದಾರೆ.



