ಕೇಪ್ ಟೌನ್ (AP): ಸುಮಾರು 150 ಪ್ರಯಾಣಿಕರೊಂದಿಗೆ ಅಟ್ಲಾಂಟಿಕ್ ಸಾಗರದ ಕೇಪ್ ವರ್ಡ್ ಕರಾವಳಿಯ ಬಳಿ ಸಾಗುತ್ತಿರುವ ಡಚ್ ವಿಹಾರ ನೌಕೆಯೊಂದರಲ್ಲಿ ಅತಿವಿರಳ 'ಹಂಟಾವೈರಸ್' ಸೋಂಕು ಕಾಣಿಸಿಕೊಂಡಿದೆ.
ಈ ಸೋಂಕಿನಿಂದಾಗಿ ಹಡಗಿನಲ್ಲಿದ್ದ ಮೂವರು ಮೃತಪಟ್ಟಿದ್ದು, ಕನಿಷ್ಠ ಮೂವರು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ.
ಪ್ರಸ್ತುತ ಹಡಗು ಸಹಾಯಕ್ಕಾಗಿ ಕಾಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಹಡಗಿನ ನಿರ್ವಾಹಕರು ತಿಳಿಸಿದ್ದಾರೆ.
ಅರ್ಜೆಂಟೀನಾದಿಂದ ಅಂಟಾರ್ಕ್ಟಿಕಾ ಮತ್ತು ದಕ್ಷಿಣ ಅಂಟ್ಲಾಂಟಿಕ್ನ ದ್ವೀಪಗಳಿಗೆ ವಾರಗಳ ಕಾಲ ಪ್ರವಾಸದಲ್ಲಿದ್ದ 'ಎಂವಿ ಹೊಂಡಿಯಸ್' ಹಡಗು ಪಶ್ಚಿಮ ಆಫ್ರಿಕಾದ ಕೇಪ್ ವರ್ಡ್ ದ್ವೀಪಕ್ಕೆ ಬಂದ ನಂತರ ಅಲ್ಲಿನ ಆರೋಗ್ಯ ಅಧಿಕಾರಿಗಳ ಸಹಾಯ ಕೋರಿದೆ.

