HEALTH TIPS

ಇ.ಡಿ: ಬಂಧನ ಪ್ರಮಾಣ ಕುಸಿತ, ಮುಟ್ಟುಗೋಲಿನಲ್ಲಿ ದಾಖಲೆ

ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಅಕ್ರಮ ವರ್ಗಾವಣೆ ಕುರಿತು ದಾಖಲಿಸಿದ ಪ್ರಕರಣದಲ್ಲಿ ಶೇಕಡ 27ರಷ್ಟು ಕುಸಿತ ಆಗಿದ್ದು, ವಶಪಡಿಸಿಕೊಳ್ಳಲಾದ ಆಸ್ತಿಯ ಮೌಲ್ಯವು ಈ ಅವಧಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ₹81 ಸಾವಿರ ಕೋಟಿ ತಲುಪಿರುವುದು ಅಧಿಕೃತ ಅಂಕಿಅಂಶಗಳಲ್ಲಿ ಕಂಡುಬಂದಿದೆ.

ಮಾರ್ಚ್‌ 31ಕ್ಕೆ ಮುಕ್ತಾಯಗೊಂಡ ಹಣಕಾಸು ವರ್ಷದ ಪ್ರಕಾರ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಕಠಿಣ ನಿರ್ಬಂಧದ ಅಡಿಯಲ್ಲಿ 2025-26ರ ಅವಧಿಯಲ್ಲಿ 2,896 ದಾಳಿ ಹಾಗೂ ಶೋಧ ಕಾರ್ಯ ನಡೆದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ದಾಳಿ ಪ್ರಮಾಣ ದ್ವಿಗುಣಗೊಂಡಿದೆ.

ಇದೇ ಅವಧಿಯಲ್ಲಿ ಇ.ಡಿ ವಶಕ್ಕೆ ಪಡೆದಿದ್ದ ಆಸ್ತಿಗಳಲ್ಲಿ ₹32 ಸಾವಿರ ಕೋಟಿಯಷ್ಟು ಮೊತ್ತವನ್ನು ನೈಜ ಮಾಲೀಕರಿಗೆ ಹಿಂತಿರುಗಿಸಲಾಗಿದೆ. 2024-25ರಲ್ಲಿ ₹15 ಸಾವಿರ ಕೋಟಿ ಮೌಲ್ಯದಷ್ಟು ಆಸ್ತಿಯನ್ನು ಮಾಲೀಕರಿಗೆ ಮರಳಿಸಲಾಗಿತ್ತು.

ಪಿಎಂಎಲ್‌ಎ ಕಾಯ್ದೆಯ ಅಡಿಯಲ್ಲಿ ಹಣ ಅಕ್ರಮ ವರ್ಗಾವಣೆಯ ಸಂದರ್ಭದಲ್ಲಿ ಶೋಧ, ಆಸ್ತಿಗಳ ಮುಟ್ಟುಗೋಲು ಹಾಗೂ ವ್ಯಕ್ತಿಗಳ ಬಂಧನಕ್ಕೆ ಇ.ಡಿಗೆ ಅವಕಾಶವಿದೆ. ಆರೋಪಿಯು ತಪ್ಪಿತಸ್ಥನಲ್ಲ, ಜಾಮೀನಿನ ಮೇಲೆ ಮತ್ತೊಂದು ಅಪರಾಧ ಮಾಡುವ ಸಾಧ್ಯತೆಯಿಲ್ಲ ಎಂದು ನ್ಯಾಯಾಲಯಕ್ಕೆ ಖಚಿತವಾದರೆ ಮಾತ್ರ ಆರೋಪಿಗೆ ಜಾಮೀನು ನೀಡಲಾಗುತ್ತದೆ.

'ಹೆಚ್ಚು ಸಾಕ್ಷ್ಯ ಆಧರಿಸಿದ ತನಿಖೆಗಳನ್ನು ಕೈಗೊಂಡಿರುವ ಕಾರಣ ಪ್ರಕರಣಗಳ ದಾಖಲಾತಿಯಲ್ಲಿ ಇಳಿಕೆ ಕಂಡಿದೆ' ಎಂದು ಇ.ಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿದ ದಾಳಿಯ ವಿವರ

ವರ್ಷ; ಪ್ರಕರಣ; ಬಂಧನ;ದಾಳಿ;ಮುಟ್ಟುಗೋಲು (₹ಕೋಟಿಗಳಲ್ಲಿ)

2025-26;2,892;156;712;81,422

2024-25;1,491;214;461;30,336

2023-24;698;272;321;12,477

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries