ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಿರಿಯ ನಿರ್ಮಾಪಕ ಕೆ ರಾಜನ್ (ಏ ಖಚಿರಿಚಿಟಿ) ಅವರು ಆತ್ಮಹತ್ಯೆಗೆ ಶರಣಾಗಿದ್ದು ಅವರಿಗೆ 85 ವರ್ಷ ವಯಸ್ಸಾಗಿತ್ತು.
ತಮ್ಮ ನೇರ ಮಾತುಗಳು ಮತ್ತು ವಿವಾದಾತ್ಮಕ ಹೇಳಿಕೆಗಳಿಗಾಗಿ ಪ್ರಸಿದ್ಧರಾಗಿದ್ದ 85 ವರ್ಷದ ರಾಜನ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ರಾಜನ್ ನಿಧನದಿಂದ ತಮಿಳು ಚಿತ್ರರಂಗಕ್ಕೆ ಭಾರೀ ಆಘಾತ ಉಂಟಾಗಿದೆ.
ವರದಿಗಳ ಪ್ರಕಾರ, ಚೆನ್ನೈನ ಅಡಯಾರ್ ಸೇತುವೆಯಿಂದ ಅವರು ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಬಳಿಕ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಅವರ ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
85ನೇ ವಯಸ್ಸಿನಲ್ಲಿ ಇಂತಹ ಹಿರಿಯ ವ್ಯಕ್ತಿಯ ದಾರುಣ ನಿಧನ ತಮಿಳು ಚಿತ್ರರಂಗದಲ್ಲಿ ವ್ಯಾಪಕ ಚರ್ಚೆ ಮತ್ತು ದುಃಖಕ್ಕೆ ಕಾರಣವಾಗಿದೆ. ಚಿತ್ರರಂಗದ ಹಲವಾರು ಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಯೂಟ್ಯೂಬ್ ವಿಡಿಯೋಗಳು
ತಮಿಳು ಚಿತ್ರರಂಗದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಕೆ ರಾಜನ್, ಚಿತ್ರರಂಗದ ಸಮಸ್ಯೆಗಳ ಬಗ್ಗೆ ಯೂಟ್ಯೂಬ್ ಚಾನೆಲ್‌ಗಳು ಮತ್ತು ಮಾಧ್ಯಮಗಳಿಗೆ ನಿರಂತರವಾಗಿ ಮಾತನಾಡುತ್ತಿದ್ದರು. ಅವರ ಅಚಾನಕ್ ನಿಧನ ಚಿತ್ರರಂಗದ ಹಲವರಲ್ಲಿ ದುಃಖ ಮತ್ತು ನಂಬಲಾರದ ಪರಿಸ್ಥಿತಿ ಉಂಟುಮಾಡಿದೆ.
ಚಿತ್ರರಂಗದಲ್ಲಿ ರಾಜನ್ ಇತಿಹಾಸ
ಕೆ ರಾಜನ್ ಅವರು 1980ರ ದಶಕದಿಂದ ತಮಿಳು ಚಿತ್ರರಂಗದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 1983ರಲ್ಲಿ ನಟ ಸುರೇಶ್ ಅಭಿನಯದ “ಬ್ರಹ್ಮಚಾರಿಗಳು” ಚಿತ್ರದ ಮೂಲಕ ನಿರ್ಮಾಪಕರಾಗಿ ತಮ್ಮ ಪ್ರಯಾಣ ಆರಂಭಿಸಿದರು.
ತಮ್ಮ ‘ಗಣೇಶ್ ಸಿನಿ ಆರ್ಟ್ಸ್’ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳನ್ನು ನಿರ್ಮಿಸಿದ ಅವರು, ಅಬ್ಬಾಸ್ ಮತ್ತು ಕುನಾಲ್ ಅಭಿನಯದ “ಉಣರ್ಚಿಗಳ್” ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶನವೂ ಮಾಡಿದ್ದರು.
ಚಿತ್ರ ನಿರ್ಮಾಣದ ಜೊತೆಗೆ, ಚಿತ್ರ ವಿತರಣಾ ವಲಯದಲ್ಲಿಯೂ ಅವರು ಪ್ರಭಾವ ಪಾತ್ರವಹಿಸಿದ್ದರು. 2000ರಲ್ಲಿ ಅವರು ಚೆನ್ನೈ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಪುತ್ರ ಪ್ರಭುಕಾಂತ್ ಕೂಡ ತಮಿಳು ಚಿತ್ರರಂಗಕ್ಕೆ ನಟನಾಗಿ ಪ್ರವೇಶಿಸಿದ್ದರು.
ನೇರಮಾತು
ಕೆ ರಾಜನ್ ಅವರು ವಿಶೇಷವಾಗಿ ಆಡಿಯೋ ಲಾಂಚ್ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ನೀಡುತ್ತಿದ್ದ ನೇರ ಹಾಗೂ ನಿರ್ಭೀತ ಭಾಷಣಗಳಿಗಾಗಿ ಪ್ರಸಿದ್ಧರಾಗಿದ್ದರು. ತಮಿಳು ಚಿತ್ರರಂಗ ಎದುರಿಸುತ್ತಿರುವ ಸಂಕಷ್ಟಗಳು, ನಿರ್ಮಾಪಕರ ಆರ್ಥಿಕ ನಷ್ಟ, ನಟರ ಹೆಚ್ಚುತ್ತಿರುವ ಸಂಭಾವನೆಗಳು ಮತ್ತು ಚಿತ್ರರಂಗದ ಅಕ್ರಮಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡುತ್ತಿದ್ದರು. ಅವರ ನೇರ ಅಭಿಪ್ರಾಯಗಳು ಆಗಾಗ ಸುದ್ದಿಯಾಗುತ್ತಿದ್ದವು.
Producer K. Rajan’s death raises disturbing and deeply uncomfortable questions!
He was 85 years old. Can an elderly man at that age really jump off a bridge so easily? The circumstances simply do not sit right.
K. Rajan was not just another producer. He was one of the very few… pic.twitter.com/wqsrhvxQfm
— Dr. Praveen Vijaykumar (@DrPraveenwrites) May 17, 2026

