HEALTH TIPS

ಕಾಸರಗೋಡು ವಿಧಾನಸಭಾ ಕ್ಷೇತ್ರ | ಮತ್ತೆ ಮುನ್ನಡೆ ಸಾಧಿಸಿದ UDF

ಕಾಸರಗೋಡು: ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಎನ್ ಡಿಎ ಮತ್ತು ಯುಡಿಎಫ್ ಮಧ್ಯೆ ತೀವ್ರ ಪೈಪೋಟಿ ಕಂಡುಬರುತ್ತಿದ್ದು, 9 ಮತ್ತು 10ನೇ ಸುತ್ತಿನಲ್ಲಿ ಮತ್ತೆ ಯುಡಿಎಫ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಎಂಟನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಎನ್ ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ (ಬಿಜೆಪಿ)ಯವರಿಗೆ 1,226 ಅಲ್ಪ ಮತಗಳ ಮುನ್ನಡೆ ಬಿಟ್ಟುಕೊಟ್ಟಿದ್ದ ಯುಡಿಎಫ್ ಅಭ್ಯರ್ಥಿ ಮಾಹಿನ್ ಹಾಜಿ 9ನೇ ಸುತ್ತಿನಲ್ಲಿ ಮತ್ತೆ ಮುನ್ನಡೆ ಸಾಧಿಸಿದ್ದರು.
9ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಮಾಹಿನ್ ಹಾಜಿ 6,198 ಮತಗಳ ಮುನ್ನಡೆ ಗಳಿಸಿದ್ದರು. 10ನೇ ಸುತ್ತಿನ ಮುಕ್ತಾಯದ ವೇಳೆ ಇವರ ಮುನ್ನಡೆ 14,202 ಮತಗಳಿಗೆ ಏರಿಕೆಯಾಗಿದೆ.
10ನೇ ಸುತ್ತಿನ ಅಂತ್ಯಕ್ಕೆ ಮಾಹಿನ್ ಹಾಜಿ 49,017 ಮತಗಳನ್ನು ಗಳಿಸಿದರೆ, ಅಶ್ವಿನಿ ಎಂ.ಎಲ್. (ಬಿಜೆಪಿ) 34,815 ಮತಗಳು ಹಾಗೂ, ಶಾನ್ ವಾಝ್ ಪಾದೂರು (ಎಲ್ ಡಿ ಎಫ್) 26,409 ಮತಗಳನ್ನು ಗಳಿಸಿದ್ದಾರೆ. ಎಣಿಕೆ ಪ್ರಕ್ರಿಯೆ ಮುಂದುವರಿದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries