ಈ ಸಹಯೋಗವು ಯುಎಡಬ್ಲ್ಯುಗೆ ಒಂದು ಮೈಲುಗಲಾಗಿದ್ದು, ಅಂತಾರಾಷ್ಟ್ರೀಯ ಪುರಾತತ್ವ ಸಂಸ್ಥೆಯೊಂದಿಗೆ ಅದು ಕೈಗೊಂಡಿರುವ ಮೊದಲ ಜಂಟಿ ಯೋಜನೆ ಇದಾಗಿದೆ.
ಈಗಾಗಲೇ ಈ ಎರಡು ಸಂಸ್ಥೆಗಳು ಯೋಜನೆಗೆ ಸಂಬಂಧಿಸಿ ತಿಳುವಳಿಕಾ ಒಪ್ಪಂದಕ್ಕೆ ಸಹಿಹಾಕಿವೆ.
ಒರ್ಸುಂಡ್ ಹಡಗು , ನೌಕಾಯಾನ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ಭಾರತವನ್ನು ತಲುಪಿದ ಮೊದಲ ಡ್ಯಾನಿಶ್ ನೌಕೆ ಇದಾಗಿದೆ.1619ರಲ್ಲಿ ಭಾರತದ ಸಾಗರಪ್ರದೇಶನ್ನು ತಲುಪಿ ಆನಂತರ ಈ ಹಡಗು ತಮಿಳುನಾಡಿನ ಕರಾವಳಿ ಪಟ್ಟಣ ಕಾರೈಕಲ್ ಬಳಿ ಪತನಗೊಂಡಿತು. ಡೆನ್ಮಾರ್ಕ್ ಹಾಗೂ ಭಾರತದ ನಡುವಿನ ಆರಂಭಿಕ ಹಂತದ ನೌಕಾಯಾನ ಸಂಪರ್ಕಗಳು ಹಾಗೂ 17ನೇ ಶತಮಾನದ ಆರಂಭದಲ್ಲಿ ಹಿಂದೂ ಮಹಾಸಾಗರದಲ್ಲಿ ನೌಕಾಯಾನ ಹಾಗೂ ವ್ಯಾಪಾರಗಳ ಕುರಿತ ವಿಸ್ತೃತ ಇತಿಹಾಸವನ್ನು ತಿಳಿದುಕೊಳ್ಳಲು ಬಗ್ಗೆ ಮಾಹಿತಿಯನ್ನು ಪಡೆಯಲು ಮಹತ್ವದ ಪುರಾತತ್ವು ಸಂಪನ್ಮೂಲ ಇದಾಗಿದೆ.
ತಿಳುವಳಿಕಾ ಒಪ್ಪಂದದ ನಿಬಂಧನೆಗಳ ಪ್ರಕಾರ ಜಲಸಮಾಧಿಯಾದ ಹಡಗಿನ ಸಂಭಾವ್ಯ ಅವಶೇಷಗಳನ್ನು ಗುರುತಿಸಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ವಿಧಾನಗಳನ್ನು ಬಳಸಿ ಈ ಸರ್ವೇಕ್ಷಣೆಯನ್ನು ನಡೆಸಲು ಈ ಯೋಜನೆಯು ಗಮನವನ್ನು ಕೇಂದ್ರೀಕರಿಸಲಿದೆ.

