ಲಂಡನ್: ಬ್ರಿಟನ್‌ನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸಲಾಗುತ್ತದೆ ಎಂದು ಅಲ್ಲಿನ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಸೋಮವಾರ ಘೋಷಿಸಿದ್ದಾರೆ.
'ಮಕ್ಕಳ ಸಂತೋಷ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದ ಪ್ರಧಾನಿಯಾಗಿ ಮತ್ತು ಪುಟ್ಟ ಮಕ್ಕಳ ತಂದೆಯಾಗಿ ಇದು ನನ್ನ ಉತ್ತಮ ನಿರ್ಧಾರ' ಎಂದು ಹೇಳಿದ್ದಾರೆ.
ಟಿಕ್‌ಟಾಕ್, ಸ್ನಾಪ್‌ಚಾಟ್, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಿಂದ ತೊಂದರೆಗೀಡಾದ ಮಕ್ಕಳು ಮತ್ತು ಇತರೊಂದಿಗೆ ದೀರ್ಘಕಾಲದ ಸಮಾಲೋಚನೆಯ ಬಳಿಕ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.
ವಾಟ್ಸ್‌ಆಯಪ್ ಅನ್ನು ನಿಷೇಧಿಸಲಾಗುವುದಿಲ್ಲ. ಅಪರಿಚಿತರು ಮಕ್ಕಳನ್ನು ಸಂಪರ್ಕಿಸಬಹುದಾದ ಗೇಮಿಂಗ್ ಸೇವೆಗಳು ಮತ್ತು ಲೈವ್ ವ್ಯವಸ್ಥೆ ಇರುವ ವೇದಿಕೆಗಳಲ್ಲಿ ವಯಸ್ಸು ದೃಢೀಕರಣ ವ್ಯವಸ್ಥೆ ಮೂಲಕ ಮಕ್ಕಳನ್ನು ನಿರ್ಬಂಧಿಸಲಾಗುತ್ತದೆ. ಇದು ಇನ್ನೂ ಅಂತಿಮಗೊಂಡಿಲ್ಲ.
ಮುಂದಿನ ವರ್ಷ ಈ ಕಾನೂನು ಜಾರಿಗೆ ಬರಲಿದೆ ಎಂದು ಸ್ಟಾರ್ಮರ್ ತಿಳಿಸಿದ್ದಾರೆ.

