HEALTH TIPS

'ಮಿಗವ್ 2026'-ಉತ್ತಮ ಫಲಿತಾಂಶ ದಾಖಲಿಸಿದ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ

ಕಾಸರಗೋಡು: ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗೈದ ಶಾಲೆಗಳು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಮತ್ತು ಸ್ಥಳೀಯಾಡಳಿತ ಇಲಾಖೆ ಜಂಟಿಯಾಗಿ ಆಯೋಜಿಸಿದ'ಮಿಕಾವ್ 2026' ಪ್ರಶಸ್ತಿ ಪ್ರದಾನ ಸಮಾರಂಭ ಕಾಸರಗೋಡು ನಗರಸಭಾಂಗಣದಲ್ಲಿ ಜರುಗಿತು. ರಾಜ್ಯ ಸ್ಥಳೀಯಾಡಳಿತ ಖಾತೆ  ಸಚಿವ ಕೆ.ಎಂ. ಶಾಜಿ ಸಮಾರಂಭ ಉದ್ಘಾಟಿಸಿದರು.


ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಎಸ್ಸೆಸೆಲ್ಸಿ, ಪ್ಲಸ್ ಟು ಮತ್ತು ವಿ.ಎಚ್.ಎಸ್.ಇ. ಪರೀಕ್ಷೆಗಳಲ್ಲಿ ಶೇ.ನೂರು ಫಲಿತಾಂಶ ದಾಖಲಿಸಿದ ಶಾಲೆಗಳಿಗಿರುವ ಪ್ರಶಸ್ತಿಯನ್ನು ಶಾಸಕರಾದ ಎ.ಕೆ.ಎಂ. ಅಶ್ರಫ್, ಕೆ. ನೀಲಕಂಠನ್ ಮತ್ತು ಗೋವಿಂದನ್ ಪಳ್ಳಿಕ್ಕಾಪ್ಪಿಲ್ ವಿತರಿಸಿದರು.  ಜಿಲ್ಲೆಯ ವಿಶೇಷ ಪೆÇಲೀಸ್ ಕೆಡೆಟ್ ವಿದ್ಯಾರ್ಥಿಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಸನ್ಮಾನಿಸಿದರು. ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ ಭರತ್ ರೆಡ್ಡಿ ಅವರು ಪ್ಲಸ್ ಟು ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕೆ.ಕೆ. ಸೋಯಾ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಮನು, ಇರ್ಫಾನಾ ಇಕ್ಬಾಲ್, ಕೆ. ಕೃಷ್ಣನ್ ಒಕ್ಲಾವ್, ರೀನಾ ಥಾಮಸ್, ಎಲ್‍ಎಸ್‍ಜಿಡಿ ಪ್ರಭಾರ ಜಂಟಿ ನಿರ್ದೇಶಕ ಕೆ.ವಿ. ಹರಿದಾಸ್, ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಪಿ. ಸವಿತಾ, ಡಯಟ್ ಪ್ರಾಂಶುಪಾಲ ಡಾ. ರಘುರಾಮ್ ಭಟ್, ಪ್ರಾದೇಶಿಕ ಉಪನಿರ್ದೇಶಕ ವಿನೋದ್ ಕುಮಾರ್ ಎ.ಕೆ, ವಿಎಚ್‍ಎಸ್‍ಇ ಸಹಾಯಕ ನಿರ್ದೇಶಕಿ ಉದಯಕುಮಾರಿ ಇ.ಆರ್, ಎಸ್‍ಎಸ್‍ಕೆ ಜಿಲ್ಲಾ ಯೋಜನಾ ಸಂಯೋಜಕ ಬಿಜು ರಾಜ್ ಉಪಸ್ಥಿತರಿದ್ದರು.  ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಎಸ್.ಬಿಜು ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries