HEALTH TIPS

ಎಬೋಲಾ ಆತಂಕ: 'ಏರ್ ಸುವಿಧಾ 2.0' ಆರಂಭಿಸಿದ ಕೇಂದ್ರ ಸರ್ಕಾರ

ನವದೆಹಲಿ: ಆಫ್ರಿಕಾದ ಕೆಲವು ಭಾಗಗಳಲ್ಲಿ ಎಬೋಲಾ ಕಾಯಿಲೆ ಹರಡುತ್ತಿರುವುದನ್ನು ಗಮನದಲ್ಲಿರಿಸಿ ದೇಶದ ಆಗಮನ ಸ್ಥಳಗಳಲ್ಲಿ ಸಾರ್ವಜನಿಕ ಆರೋಗ್ಯದ ಬಗ್ಗೆ ನಿಗಾ ಬಲಪಡಿಸಲು ನಾಗರಿಕ ವಿಮಾನ ಯಾನ ಸಚಿವಾಲಯ ಮತ್ತು ದಿಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಗುರುವಾರ ಮೇಲ್ದರ್ಜೆಗೇರಿಸಲಾದ, ಸಂಪರ್ಕ ರಹಿತ ಪ್ರಯಾಣಿಕರ ಆರೋಗ್ಯ ಸ್ವಯಂ ಘೋಷಣಾ ಪೋರ್ಟಲ್ ಅನ್ನು ಆರಂಭಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ 'ಏರ್ ಸುವಿಧಾ 2.0' ಪೋರ್ಟಲ್, ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ವಲಸೆ ಅನುಮತಿಗೆ ಮುನ್ನ ಕಡ್ಡಾಯವಾಗಿ ಆನ್‌ಲೈನ್ ಆರೋಗ್ಯ ಸ್ವಯಂ ಘೋಷಣೆಯನ್ನು ಸಲ್ಲಿಸಲು ಅವಕಾಶ ನೀಡುತ್ತದೆ.

ಈ ಅರ್ಜಿ ಕಳೆದ 21 ದಿನಗಳ ಪ್ರಯಾಣದ ಇತಿಹಾಸ, ಸೋಂಕಿಗೆ ಒಡ್ಡಿಕೊಂಡಿರುವ ವಿವರಗಳು ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಲಕ್ಷಣಗಳಿದ್ದರೆ, ಅವುಗಳ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ.

ಈ ಪೋರ್ಟಲ್ ಏರ್‌ಪೋರ್ಟ್ ಆರೋಗ್ಯ ಅಧಿಕಾರಿ, ಬ್ಯುರೋ ಆಫ್ ಇಮಿಗ್ರೇಷನ್, ಐಡಿಎಸ್‌ಪಿ ಮತ್ತು ರಾಜ್ಯ ಕಣ್ಗಾವಲು ಅಧಿಕಾರಿಗಳೊಂದಿಗೆ ನೈಜ ಸಮಯದ ದತ್ತಾಂಶವನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದು ಆಗಮನದ ಪ್ರಕ್ರಿಯೆಯನ್ನು ಯಾವುದೇ ಅಡೆ ತಡೆ ಇಲ್ಲದೆ ಮತ್ತು ಸಂಪರ್ಕ ರಹಿತವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ, ವಿಮಾನ ನಿಲ್ದಾಣಗಳಲ್ಲಿ ಇಳಿದ ನಂತರ ಯಾವುದೇ ಭೌತಿಕ ಅರ್ಜಿಗಳನ್ನು ಭರ್ತಿ ಮಾಡುವ ಅಗತ್ಯವಿರುವುದಿಲ್ಲ. ಅಲ್ಲದೆ, ಅಪಾಯದಲ್ಲಿರುವ ಪ್ರಯಾಣಿಕರನ್ನು ತ್ವರಿತವಾಗಿ ಗುರುತಿಸಿ ಸೂಕ್ತ ಚಿಕಿತ್ಸೆಗೆ ಒಳಪಡಿಸಲು ಇದು ನೆರವಾಗುತ್ತದೆ.

ಏರ್ ಸುವಿಧಾ ಸ್ವಯಂ ಘೋಷಣಾ ಅರ್ಜಿಯನ್ನು ಭಾರತಕ್ಕೆ ಆಗಮಿಸುವ 24 ಗಂಟೆಗಳ ಮುಂಚಿತವಾಗಿ ಭರ್ತಿ ಮಾಡಬಹುದು. ''ಪ್ರಯಾಣಿಕರು ವಿಮಾನ ಹತ್ತುವ ಮೊದಲು ಅಥವಾ ವೆಬ್ ಚೆಕ್-ಇನ್ ಮಾಡುವ ಸಮಯದಲ್ಲಿ ಈ ಅರ್ಜಿಗಳನ್ನು ಭರ್ತಿ ಮಾಡುವಂತೆ ವಿನಂತಿಸಲಾಗಿದೆ. ಇದರಿಂದ ಆಗಮಿಸಿದ ತತ್‌ಕ್ಷಣ ತ್ವರಿತ ಕ್ಲಿಯರೆನ್ಸ್ ಪಡೆಯಬಹುದು. ವಿಮಾನ ನಿಲ್ದಾಣದಲ್ಲಿ ಕೇವಲ ಡೌನ್‌ಲೋಡ್ ಮಾಡಿದ ಸ್ವಯಂ ಘೋಷಣಾ ಅರ್ಜಿ (ಎಸ್‌ಡಿಎಫ್) ಅಂತರ ರಾಷ್ಟ್ರೀಯ ಪ್ರಯಾಣ ಆರೋಗ್ಯ ಡೆಸ್ಕ್ ಅಥವಾ ಇಮಿಗ್ರೇಷನ್ ಕೌಂಟರ್‌ನಲ್ಲಿ ತೋರಿಸಿದರೆ ಸಾಕಾಗುತ್ತದೆ'' ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಡೇಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಂಗಾಡಾದಲ್ಲಿ ಎಬೋಲಾ/ಬುಂಡಿಬುಗ್ಯೋ ವೈರಸ್ ಕಾಯಿಲೆ ಹರಡುತ್ತಿರುವುದನ್ನು ಗಮನಿಸಿ ವಿಶ್ವ ಆರೋಗ್ಯ ಸಂಸ್ಥೆ ಮೇ 17ರಂದು ಅಂತರ ರಾಷ್ಟ್ರೀಯ ಆರೋಗ್ಯ ನಿಯಮ 2005ರ ಅಡಿಯಲ್ಲಿ ಇದನ್ನು ಜಾಗತಿಕ ತುರ್ತು ಪರಿಸ್ಥಿತಿ ಎಂದು ಘೋಷಿಸಿದ ಬೆನ್ನಲ್ಲೇ ಭಾರತ ಸರಕಾರ ಈ ಪೋರ್ಟಲ್ ಅನ್ನು ಆರಂಭಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries