ಮಂಜೇಶ್ವರ: ಇನ್ಫೆಂಟ್ ಜೀಸಸ್ ಸೈರೊ ಮಲಬಾರ್ ಚರ್ಚ್ ಹೊಸಂಗಡಿ ಇದರ ವತಿಯಿಂದ ಜೂ. 28 ರಂದು ಬೆಳಗ್ಗೆ 10.30 ಕ್ಕೆ ಚರ್ಚ್ ಗೆ ಒಳಪಟ್ಟ ವಿವಿಧ ವಲಯಗಳಲ್ಲಿರುವ ಎಸ್.ಎಸ್.ಎಲ್.ಸಿ, ಪ್ಲಸ್ ಟು, ಪ್ರೊಫೆಷನಲ್ ಕೋರ್ಸ್ ಗಳಲ್ಲಿ ಅತ್ಯಧಿಕ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಣ್ಣೂರು ಯೂನಿವರ್ಸಿಟಿ ಮಂಜೇಶ್ವರ ಕ್ಯಾಂಪಸ್ ನಲ್ಲಿ (ಸ್ಕೂಲ್ ಆಫ್ ಲೀಗಲ್ ಸ್ಟಡೀಸ್) ಎಲ್.ಎಲ್.ಬಿಯಲ್ಲಿ ಉನ್ನತ ಪದವಿ (ಫಸ್ಟ್ ಕ್ಲಾಸ್) ಯನ್ನು ಪಡೆದ ಚರ್ಚ್ ನ ಧರ್ಮಗುರು ಫಾದರ್ ಲೂಯಿ ಮರಿಯಾ ದಾಸ್ ಇವರನ್ನು ಗೌರವಿಸಲಾಗುವುದು. ಜೊತೆಗೆ ಮಂಜೇಶ್ವರ ಶಾಸಕರಾಗಿ ಮೂರು ಬಾರಿ ಆಯ್ಕೆಯಾದ ಎಕೆಎಂ ಅಶ್ರಫ್ ಅವರನ್ನು ಸನ್ಮಾನಿಸಲಾಗುವುದು ಎಂದು ಚರ್ಚ್ ನ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

.jpg)
