HEALTH TIPS

ಟ್ರಂಪ್‌ಗೆ 80 ವರ್ಷ: ಸಮರ ಕಲೆಗಳ ಪ್ರದರ್ಶನ ಆಯೋಜನೆ

 ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ 80ನೇ ಜನ್ಮದಿನಾಚರಣೆ ಪ್ರಯುಕ್ತ ಸಮರ ಕಲೆಗಳ ಪ್ರದರ್ಶನ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.


ಶ್ವೇತಭವನದ ದಕ್ಷಿಣದಲ್ಲಿರುವ ಹುಲ್ಲುಹಾಸಿನಲ್ಲಿ ವಿಶೇಷ ಅಂಕಣ ನಿರ್ಮಿಸಲಾಗಿದ್ದು, ಭಾರತೀಯ ಕಾಲಮಾನದಂತೆ ಸೋಮವಾರ 'ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್‌ಷಿನ್‌'(ಯುಎಫ್‌ಸಿ) ಸ್ಪರ್ಧೆಗಳು ನಡೆಯಲಿವೆ.

ಮುಂದಿನ ತಿಂಗಳು ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವ ನೆರವೇರಲಿದೆ. ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷರಾಗಿ 17 ತಿಂಗಳು ಕಳೆದಿವೆ. ಇದರ ಅಂಗವಾಗಿಯೂ 'ಯುಎಫ್‌ಸಿ ಫ್ರೀಡಂ 250' ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಐದು ದೇಶಗಳ ಜಟ್ಟಿಗಳು ತಮ್ಮ ಕಸರತ್ತು ಪ್ರದರ್ಶಿಸಲಿದ್ದು, 4 ಸಾವಿರ ಆಹ್ವಾನಿತ ಪ್ರೇಕ್ಷಕರು ಈ ಕಾಳಗಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ. ಜನರಿಗೆ ಟಿಕೆಟ್‌ಗಳನ್ನು ಮಾರಾಟ ಮಾಡಿಲ್ಲ. ಆದರೆ, ಪಂದ್ಯಗಳನ್ನು ಪ್ಯಾರಾಮೌಂಟ್ ಸುದ್ದಿವಾಹಿನಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಯುಎಫ್‌ಸಿ ಚಾಂಪಿಯನ್ ಇಲಿಯಾ ಟೊಪೋರಿಯಾ ಹಾಗೂ ಮಾಜಿ ಚಾಂಪಿಯನ್ ಜಸ್ಟಿನ್‌ ಗೇಜಿ ಅವರು ಈ ಸಮರ ಕಲೆ ಸ್ಪರ್ಧೆಯ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಈ ಕಾರ್ಯಕ್ರಮಕ್ಕೆ 60 ಮಿಲಿಯನ್‌ ಡಾಲರ್‌ಗಿಂತಲೂ ಅಧಿಕ (ಅಂದಾಜು ₹570 ಕೋಟಿ) ವೆಚ್ಚ ಮಾಡುತ್ತಿರುವುದಾಗಿ ಯುಎಫ್‌ಸಿ ಹೇಳಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries