HEALTH TIPS

ಭ್ರಷ್ಟಾಚಾರ ಪ್ರಕರಣ | Assam ನ ಮಾಜಿ DIGಯ 53 ಕೋಟಿ ರೂ. ಮೌಲ್ಯದ ಸೊತ್ತು ಮುಟ್ಟುಗೋಲು

ಗುವಾಹಟಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಅಸ್ಸಾಂನ ಮಾಜಿ ಪೊಲೀಸ್ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ಪ್ರಶಾಂತ್ ಕುಮಾರ್ ದತ್ತಾ ಅವರಿಗೆ ಸೇರಿದ 53 ಕೋ. ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದೆ.

ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಗಳಲ್ಲಿ ಗುವಾಹಟಿಯಲ್ಲಿರುವ ಹಲವು ಹೋಟೆಲ್‌ ಗಳು ಮತ್ತು ಮುಂಬೈಯಲ್ಲಿರುವ ಎರಡು ಕಟ್ಟಡಗಳು ಸೇರಿವೆ.

EDಯ ಪ್ರಕಾರ, ದತ್ತಾ ಅವರು ಸರ್ಕಾರಿ ಸೇವೆಯಲ್ಲಿದ್ದಾಗ, ಅಂದರೆ 1992 ಮತ್ತು 2019ರ ನಡುವೆ ಈ ಆಸ್ತಿಗಳನ್ನು ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಅವರ ಆದಾಯದ ಮೂಲಕ್ಕಿಂತ ಹೆಚ್ಚಾಗಿದೆ ಎಂದು ನಂಬಲಾಗಿದೆ.

ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಗಳಲ್ಲಿ ಪಲ್ಟಾನ್ ಬಜಾರ್‌ನಲ್ಲಿರುವ ಹೋಟೆಲ್ ಭಾರ್ಗವ್ ಮತ್ತು ಭಾರ್ಗವ್ ಇನ್, ಲಾಖ್ರಾದಲ್ಲಿರುವ ಹೋಟೆಲ್ ಭಾರ್ಗವ್, ಗಾರ್ಚುಕ್‌ನ ಬೆಟ್ಕುಚಿಯಲ್ಲಿರುವ ಭಾರ್ಗವ್ ಗ್ರ್ಯಾಂಡ್ ಹಾಗೂ ಮುಂಬೈಯಲ್ಲಿರುವ ಎರಡು ಐಷಾರಾಮಿ ಕಟ್ಟಡಗಳು ಸೇರಿವೆ.

ಅಸ್ಸಾಂ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿಯೂ ಪ್ರಶಾಂತ್ ಕುಮಾರ್ ದತ್ತಾ ಪ್ರಮುಖ ಆರೋಪಿಯಾಗಿದ್ದರು. ಇದು ಅಸ್ಸಾಂನ ಅತಿ ದೊಡ್ಡ ನೇಮಕಾತಿ ಹಗರಣಗಳಲ್ಲಿ ಒಂದಾಗಿದೆ.

ಈ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ಹಲವು ತಿಂಗಳುಗಳ ಕಾಲ ಬಂಧನದಿಂದ ತಪ್ಪಿಸಿಕೊಂಡಿದ್ದ ದತ್ತಾ ಅವರನ್ನು 2020ರ ಅಕ್ಟೋಬರ್‌ ನಲ್ಲಿ ಭಾರತ-ನೇಪಾಳ ಗಡಿಯ ಸಮೀಪ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದರು.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಅಕ್ರಮ ಮಾರ್ಗಗಳ ಮೂಲಕ ಸಂಪತ್ತು ಗಳಿಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ED ನಡೆಸುತ್ತಿರುವ ನಿರಂತರ ಪ್ರಯತ್ನಗಳಲ್ಲಿ ಈ ಇತ್ತೀಚಿನ ಕ್ರಮ ಮಹತ್ವದ ಹೆಜ್ಜೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries