ಕಾಸರಗೋಡು: ನೀಲೇಶ್ವರದಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಳಿಸಿಕೊಂಡಿದ್ದಾರೆ. ಕೋಟಪ್ಪುರಂ ಇಡತ್ತ್ ಜುಮಾ ಮಸೀದಿ ದರ್ಸ್‍ನಲ್ಲಿ ವಾಸಿಸಿ ಈ ಶೈಕ್ಷಣಿಕ ವರ್ಷದಿಂದ ಕೋಟಪ್ಪುರಂ ಶಾಲೆಗೆ ಸೇರಿದ್ದ ಅಲ್ ಅಮೀನ್ (13) ಹಾಗೂ ಮುಹಮ್ಮದ್ ಅಮೀನ್ (13) ಎಂಬವರು ನಾಪತ್ತೆಯಾದವರು.
ಇವರಿಬ್ಬರೂ 8ನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಾಗಿದ್ದಾರೆ. ಶುಕ್ರವಾರ ಸಂಜೆಯಿಂದ ಇವರು ನಾಪತ್ತೆಯಾಗಿದ್ದಾರೆ. ಇತರ ವಿದ್ಯಾರ್ಥಿಗಳಲ್ಲಿ ನಾವು ಊರಿಗೆ ತೆರಳುತ್ತಿರುವುದಾಗಿ ತಿಳಿಸಿ ಶಾಲೆಯಿಂದ ಹೋಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ರಾತ್ರಿ ವರೆಗೂ ವಾಪಸಾಗದ ಹಿನ್ನೆಲೆಯಲ್ಲಿ ಪೆÇಲೀಸರಿಗೆ ಮಾಹಿತಿ ನೀಡಲಾಗಿದೆ.

