ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗದಿನ 2026 ಪ್ರಯುಕ್ತ ಯೋಗ ತರಬೇತಿ ನಡೆಯಿತು.
ಶಾಲಾ ಪ್ರಬಂಧಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಯೋಗ ಬದುಕಿನ ಮಾರ್ಗವನ್ನು ಹಸನುಗೊಳಿಸುವ ವಿದ್ಯೆಯಾಗಿದೆ. ಪ್ರಾಚೀನ ಭಾರತೀಯ ಪರಿಕಲ್ಪನೆಯನ್ನು ಇಂದು ಜಗತ್ತು ಅನುಸರಿಸುತ್ತಿರುವುದು ಅಭಿಮಾನಕರ ವಿಷಯ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಶಿಕ್ಷಕಿ ಮೃದುಲ ಶುಭಹಾರೈಸಿದರು. ಮೀಂಜ ಸರ್ಕಾರಿ ಹೊಮಿಯೋ ಡಿಸ್ಪೆನ್ಸರಿಯ ತರಬೇತುದಾರೆ ಸಜಿತ ಮಕ್ಕಳಿಗೆ ಯೋಗದ ವಿವಿಧ ಭಂಗಿಗಳನ್ನು ತರಬೇತಿ ನೀಡಿದರು. ಮಕ್ಕಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗಿಯಾದರು. ಅಧ್ಯಾಪಕ ರಾಜಾರಾಮ ಸ್ವಾಗತಿಸಿ, ಬ್ರಿಜೇಶ್ ವಂದಿಸಿದರು. ಡಾ.ವಿಘ್ನೇಶ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.



