ಪೆರ್ಲ: ವಾಚನಾ ದಿನಾಚರಣೆ ಅಂಗವಾಗಿ ಎಣ್ಮಕಜೆ ಪಂಚಾಯಿತಿ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ವಾಚನಾ ಸಪ್ತಹ ಆಯೋಜಿಸಲಾಯಿತು. ಕುಂಬಳೆ ಬಿ ಆರ್ ಸಿ ಯ ಕೋರ್ಡಿನೇಟರ ಸುರೇಶ್ ಸಮಾರಂಭ ಉದ್ಘಾಟಿಸಿ, ಮಾತನಾಡಿ, ಬೌದ್ಧಿಕ ವಿಕಾಸಕ್ಕೆ ಓದು ಸಹಕಾರಿ. ವಿದ್ಯಾರ್ಥಿಗಳಲ್ಲಿ ಎಳವೆಯಿಂದಲೇ ಓದಿನ ಬಗ್ಗೆ ಆಸಕ್ತಿ ಮೂಡಿಸಲು ಹೆತ್ತವರು ಪ್ರೇರಣೆ ನೀಡಬೇಕು ಎಂದು ತಿಳಿಸಿದರು.
ವಾಚನಾ ಸಪ್ತಾಹವನ್ನು ವಿವಿಧ ಪುಸ್ತಕಗಳ ಓದುವಿಕೆ, ಪುಸ್ತಕ ವಿತರಣೆ ಸೇರಿದಂತೆ ವಾರಪೂರ್ತಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ರಾಜೇಶ್ ಬಿ ಸ್ವಾಗತಿಸಿದರು. ಶಾಲಾ ಶಿಕ್ಷಕ ಮೊಹಮ್ಮದ್ ಪೈಝಲ್ ವಂದಿಸಿದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.



