ಸಿಂಗಪುರ : 'ಎರಡು ತಿಂಗಳಿನಿಂದ ನಮಗೆ ಸಂಬಳ ನೀಡಿಲ್ಲ. ಈಗ ಕಂಪನಿಯನ್ನೇ ಮುಚ್ಚಲಾಗಿದೆ ಎಂದು ಹೇಳಲಾಗುತ್ತಿದೆ' ಎಂದು ಭಾರತ ಮತ್ತು ಬಾಂಗ್ಲಾದೇಶದ 100ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಭೇಟಿನೀಡಿ, ಅಲ್ಲಿನ ಅಧಿಕಾರಿಗಳಿಗೆ ದೂರಿತ್ತರು.
ಇಲ್ಲಿನ 'ಕೆಪಿಎ ಎಂಜಿನಿಯರಿಂಗ್' ಎನ್ನುವ ಹವಾನಿಯಂತ್ರಕಗಳನ್ನು ನಿರ್ವಹಣೆ ಮಾಡುವ ಕಂಪನಿಯಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ. 'ಸಂಬಳ ನೀಡದ ಕುರಿತು ಕಂಪನಿಯಲ್ಲಿ ಮತ್ತು ಕಂಪನಿಯ ಮಾಲೀಕರಲ್ಲಿ ಕೇಳಿಕೊಳ್ಳಲಾಯಿತು. ಆದರೂ ಸಂಬಳದ ವ್ಯವಸ್ಥೆಯಾಗಿಲ್ಲ. ಈಗ ಯಾರ ಬಳಿ ಹೋಗಬೇಕು ಎಂದು ತಿಳಿಯುತ್ತಿಲ್ಲ' ಎಂದು ಸಂಪತ್ ಎಂಬವರು ಹೇಳಿದ್ದಾರೆ.

