HEALTH TIPS

ಹಾರ್ಮುಝ್ ತೆರೆದರೂ ಇರಾನ್ ವಿರುದ್ಧದ ನಿರ್ಬಂಧದಲ್ಲಿ ಸಡಿಲಿಕೆಯಿಲ್ಲ: ಅಮೆರಿಕ

 ವಾಶಿಂಗ್ಟನ್: ಹಾರ್ಮುಝ್ ಜಲಸಂಧಿಯನ್ನು ಇರಾನ್ ಮತ್ತೆ ಸಂಪೂರ್ಣವಾಗಿ ತೆರೆದರೂ ಅದರ ವಿರುದ್ಧದ ನಿರ್ಬಂಧಗಳಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ. ಇರಾನ್ ತನ್ನ ಸಂವರ್ಧಿತ ಯುರೇನಿಯಂ ಸಂಗ್ರಹವನ್ನು ಬಿಟ್ಟುಕೊಟ್ಟರೆ ಮಾತ್ರ ಇಂತಹ ಸಡಿಲಿಕೆ ಸಾಧ್ಯ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. 


ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಮಾತುಕತೆ ಕುರಿತು ಸಂಸತ್‌ನಲ್ಲಿ ಮಾತನಾಡಿದ ಅವರು, 'ಇರಾನ್‌ ಗೆ ನಿರ್ಬಂಧಗಳಿಂದ ಯಾವುದೇ ರಿಯಾಯಿತಿ ನೀಡಬೇಕಾದರೆ ಅದು ಅದರ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿರಬೇಕು; ಹಾರ್ಮುಝ್ ಜಲಸಂಧಿಯ ವಿಷಯಕ್ಕೆ ಅಲ್ಲ. ಕದನ ವಿರಾಮದ ಬಳಿಕ ಜಲಸಂಧಿಯನ್ನು ತೆರೆಯುವ ತನ್ನ ಬದ್ಧತೆಯನ್ನು ಇರಾನ್ ಪಾಲಿಸಿದ್ದರೆ ದಿಗ್ಬಂಧನ ಹೇರಲಾಗುತ್ತಿರಲಿಲ್ಲ. ಇರಾನ್‌ನ ಕಾನೂನುಬಾಹಿರ ಕ್ರಮಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ' ಎಂದು ಹೇಳಿದ್ದಾರೆ.

ವಾಣಿಜ್ಯ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಅದರ ವಿರುದ್ಧ ನೌಕಾ ದಿಗ್ಬಂಧನ ಜಾರಿಯಲ್ಲಿದೆ. 'ಹಾರ್ಮುಝ್ ಮೂಲಕ ಯಾವುದೇ ಹಡಗನ್ನು ಸಾಗಲು ಬಿಡುವುದಿಲ್ಲ ಎಂದಾದರೆ, ಇರಾನ್‌ನ ಹಡಗುಗಳೂ ಸಂಚರಿಸಬಾರದು. ಹಾರ್ಮುಝ್ ಅನ್ನು ಮತ್ತೆ ತೆರೆಯುವ ತನ್ನ ವಾಗ್ದಾನವನ್ನು ಪಾಲಿಸಲು ವಿಫಲವಾಗುವ ಮೂಲಕ ಇರಾನ್ ಕದನ ವಿರಾಮವನ್ನು ಉಲ್ಲಂಘಿಸಿದೆ' ಎಂದು ರೂಬಿಯೊ ಆರೋಪಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries