ಆಧುನಿಕ ಜೀವನಶೈಲಿಯಲ್ಲಿ ಸಕ್ಕರೆಯು ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿದೆ. ಆದರೆ "ಅತಿಯಾದರೆ ಅಮೃತವೂ ವಿಷ" ಎಂಬಂತೆ, ಸಕ್ಕರೆಯ ಅತಿಯಾದ ಸೇವನೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಹಾಗಾದರೆ ಒಬ್ಬ ವ್ಯಕ್ತಿಯು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (ಂಊಂ) ನೀಡಿರುವ ಮಾರ್ಗಸೂಚಿಗಳ ಪ್ರಕಾರ ಪುರುಷರು 36 ಗ್ರಾಂ, ಮಹಿಳೆಯರು 25 ಗ್ರಾಂ, 2-18 ವರ್ಷದೊಳಗಿನ ಮಕ್ಕಳು 25 ಗ್ರಾಂಗಿಂತ ಕಡಿಮೆ ಸಕ್ಕರೆ ಸೇವನೆ ಮಾಡಬೇಕು. 2 ವರ್ಷದೊಳಗಿನ ಮಕ್ಕಳಿಗೆ ಸಕ್ಕರೆ ನೀಡಲೇಬಾರದು.
ಹೆಚ್ಚು ಸಕ್ಕರೆ ಸೇವನೆಯಿಂದಾಗುವ ದುಷ್ಪರಿಣಾಮಗಳು
ತೂಕ ಹೆಚ್ಚಳ (Obesity): ಸಕ್ಕರೆಯು ಕೇವಲ ಕ್ಯಾಲೋರಿಗಳನ್ನು ನೀಡುತ್ತದೆ ಹೊರತು ಯಾವುದೇ ಪೋಷಕಾಂಶಗಳನ್ನಲ್ಲ. ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ.
ಮಧುಮೇಹ (Diabetes): ಅತಿಯಾದ ಸಕ್ಕರೆ ಸೇವನೆಯಿಂದ ಇನ್ಸುಲಿನ್ ಪ್ರತಿರೋಧ ಉಂಟಾಗಿ ಟೈಪ್-2 ಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚುತ್ತದೆ.
ಹೃದಯ ಸಂಬಂಧಿ ಕಾಯಿಲೆ: ಅಧಿಕ ಸಕ್ಕರೆಯು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಹೃದಯಾಘಾತದ ಅಪಾಯವನ್ನು ತಂದೊಡ್ಡುತ್ತದೆ.
ಹಲ್ಲಿನ ಸಮಸ್ಯೆ: ಸಕ್ಕರೆಯು ಬಾಯಿಯಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಕಾರಿ, ಇದು ಹಲ್ಲು ಹುಳುಕಾಗಲು ಪ್ರಮುಖ ಕಾರಣ.
ಚರ್ಮದ ಮೇಲೆ ಪ್ರಭಾವ: ಅತಿಯಾದ ಸಿಹಿ ಸೇವನೆಯಿಂದ ಮೊಡವೆಗಳು ಮತ್ತು ವಯಸ್ಸಾದ ಲಕ್ಷಣಗಳು (ಸುಕ್ಕುಗಳು) ಬೇಗನೆ ಕಾಣಿಸಿಕೊಳ್ಳುತ್ತವೆ.

