ಕುಂಬಳೆ: ಪುತ್ರ ಚಲಾಯಿಸುತ್ತಿದ್ದ ಸ್ಕೂಟರ್‍ನಿಂದ ಬಿದ್ದು, ತಾಯಿ ದಾರುಣವಾಗಿ ಮೃತಪಟ್ಟ ಘಟನೆ ಕುಂಬಳೆಯಲ್ಲಿ ನಡೆದಿದೆ. ಕುಂಬಳೆ ಸುನಾಮಿ ಕಾಲನಿ ನಿವಾಸಿ, ಮೊಯ್ದೀನ್‍ಕುಞÂ ಎಂಬವರ ಪತ್ನಿ ಹಾತಿಕಾ(48) ಮೃತಪಟ್ಟ ಮಹಿಳೆ. ಸ್ಕೂಟರ್ ಚಲಾಯಿಸುತ್ತಿದ್ದ ಇವರ ಪುತ್ರ ಮುಬಾರಕ್ (19) ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಶುಕ್ರವಾರ ರಾತ್ರಿ ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ದೇವಿನಗರ ಸರ್ವೀಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಇದರಿಂದ ಗಂಭೀರ ಗಾಯಗೊಂಡ ಹಾತಿಕ ಅವರನ್ನು ತಕ್ಷಣ ಆಸ್ಪತ್ರೆಗೆ ತಲುಪಿಸಿದರೂ ಪ್ರಯೋಜನವಾಗಿರಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಅಪಘಾತ ಬಗ್ಗೆ ಕುಂಬಳೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪುತ್ರ ಚಲಾಯಿಸುತ್ತಿದ್ದ ಸ್ಕೂಟರ್‍ನಿಂದ ಬಿದ್ದು ತಾಯಿ ಮೃತ್ಯು
0
ಜೂನ್ 21, 2026

Tags