HEALTH TIPS

ರಫ್ತು ಮಾಡುವ ಪೆಟ್ರೋಲ್, ಡೀಸೆಲ್, ಎಟಿಎಫ್ ಮೇಲಿನ ತೆರಿಗೆ ಕಡಿತಗೊಳಿಸಿದ ಕೇಂದ್ರ ಸರಕಾರ

 ನವದೆಹಲಿ: ಕೇಂದ್ರ ಸರಕಾರವು ರವಿವಾರ ಇಂಧನ ರಫ್ತುಗಳ ಮೇಲಿನ 'ಅಧಿಕ ಲಾಭ ತೆರಿಗೆ' (ವಿಂಡ್‌ಫಾಲ್ ಗೇನ್ಸ್ ಟ್ಯಾಕ್ಸ್)ಯನ್ನು ಕಡಿತಗೊಳಿಸಿದೆ. ಪೆಟ್ರೋಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ 3 ರೂಪಾಯಿಯಿಂದ 1.5 ರೂಪಾಯಿಗೆ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ 16.5 ರೂಪಾಯಿಯಿಂದ 13.5 ರೂಪಾಯಿಗೆ ಇಳಿಸಲಾಗಿದೆ.


ಅದೇ ವೇಳೆ, ವಿಮಾನ ಇಂಧನ (ಎಟಿಎಫ್) ಮೇಲಿನ ಅಧಿಕ ಲಾಭ ತೆರಿಗೆಯನ್ನು ಪ್ರತಿ ಲೀಟರ್‌ಗೆ 16 ರೂಪಾಯಿಯಿಂದ 9.5 ರೂಪಾಯಿಗೆ ಕಡಿತಗೊಳಿಸಲಾಗಿದೆ.

ಹಣಕಾಸು ಸಚಿವಾಲಯದ ಅಧಿಸೂಚನೆಯೊಂದು ಈ ತೆರಿಗೆ ದರ ಪರಿಷ್ಕರಣೆಯನ್ನು ಘೋಷಿಸಿದೆ. ಪರಿಷ್ಕೃತ ದರಗಳು ಸೋಮವಾರದಿಂದ ಜಾರಿಗೆ ಬರಲಿವೆ.

ಯುದ್ಧ ಮುಂತಾದ ಬಾಹ್ಯ ಕಾರಣಗಳಿಂದಾಗಿ ಕಂಪೆನಿಯೊಂದರ ಉತ್ಪನ್ನಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗಿ ಅದರ ಲಾಭವು ಅಗಾಧ ಪ್ರಮಾಣದಲ್ಲಿ ವೃದ್ಧಿಯಾದರೆ ಸರಕಾರವು ಆ ಉತ್ಪನ್ನಗಳಿಗೆ ಅಧಿಕ ಲಾಭ ತೆರಿಗೆಯನ್ನು ವಿಧಿಸುತ್ತದೆ.

ಆದರೆ, ದೇಶೀಯ ಬಳಕೆಗೆ ಬಿಡುಗಡೆ ಮಾಡಲಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಪ್ರಸ್ತುತ ಅಬಕಾರಿ ಸುಂಕ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್‌ನ ಸರಾಸರಿ ಅಂತರರಾಷ್ಟ್ರೀಯ ಬೆಲೆಗಳ ಆಧಾರದಲ್ಲಿ ನಿಗದಿತ ಅವಧಿಯಲ್ಲಿ ದರಗಳನ್ನು ನಿಗದಿಪಡಿಸಲಾಗುತ್ತದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ದರ ಪರಿಷ್ಕರಣೆ ಮಾಡಲಾಗುತ್ತಿದ್ದು, ಹಿಂದಿನ ಬದಲಾವಣೆಯನ್ನು 2026ರ ಮೇ 16 ರಿಂದ ಜಾರಿಗೆ ಬರುವಂತೆ ಮಾಡಲಾಗಿತ್ತು.

ಅಮೆರಿಕ-ಇರಾನ್ ಯುದ್ಧ ಭುಗಿಲೆದ್ದ ನಂತರ ಜಾಗತಿಕ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಈ ಸಂಘರ್ಷಕ್ಕೆ ಸಂಬಂಧಿಸಿದ ಪೂರೈಕೆ ನಿರ್ಬಂಧಗಳು ಮತ್ತು ಹಾರ್ಮುಝ್‌ ಜಲಸಂಧಿಯ ಸುತ್ತಲಿನ ಅಡಚಣೆಗಳು ಮಾರುಕಟ್ಟೆಯ ಮೇಲಿನ ಒತ್ತಡವನ್ನು ಹೆಚ್ಚಿಸಿವೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries