HEALTH TIPS

USA | ಮಿಸ್ಸೋರಿಯಲ್ಲಿ ವಿಮಾನ ಪತನ: 12 ಮಂದಿ ಮೃತ್ಯು

 ಮಿಸ್ಸೋರಿ: ಇಲ್ಲಿನ ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದ ಬಳಿಯ ಮೈದಾನದಲ್ಲಿ ಸ್ಕೈಡೈವರ್ಸ್ ಅವರನ್ನು ಕರೆದೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡು ಎಲ್ಲ 12 ಮಂದಿ ಮೃತಪಟ್ಟಿದ್ದಾರೆ. ಪತನಗೊಂಡ ವಿಮಾನ ಬೆಂಕಿ ಹತ್ತಿಕೊಂಡು ದಟ್ಟ ಹೊಗೆಯಿಂದ ಆವೃತವಾಗಿರುವ ದೃಶ್ಯಾವಳಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. 


ಪರಿಹಾರ ಕಾರ್ಯದಲ್ಲಿ ಬಟ್ಲರ್ ಪೊಲೀಸ್ ಠಾಣೆ ಮತ್ತು ಕೌಂಟಿ ಶ್ರಾಫ್ ಅಧಿಕಾರಿಗಳಿಗೆ ನೆರವಾಗುತ್ತಿರುವುದಾಗಿ ಮಿಸ್ಸೋರಿ ರಾಜ್ಯ ಹೆದ್ದಾರಿ ಗಸ್ತು ಪಡೆ ಹೇಳಿದೆ. ಕಾನ್ಸಸ್ ನಗರದಿಂದ 65 ಕಿಲೋಮೀಟರ್ ದಕ್ಷಿಣದ ಬಟ್ಲರ್ ಎಂಬ ಪಟ್ಟಣದಲ್ಲಿ ಈ ದುರಂತ ಸಂಭವಿಸಿದೆ.

ಸ್ಕೈಡೈವರ್ಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ವಿಮಾನ ಬೆಳಿಗ್ಗೆ 11.30ರ ವೇಳೆಗೆ ತುರ್ತು ಸಂದೇಶವನ್ನು ರವಾನಿಸಿದೆ. ವಿಮಾನ ಪತನಗೊಂಡು ಬೆಂಕಿ ಹತ್ತಿಕೊಂಡಿದೆ ಎಂದು ಮಿಸ್ಸೋರಿ ಹೆದ್ದಾರಿ ಗಸ್ತು ವಿಭಾಗದ ಸಾರ್ಜಂಟ್ ಜೆಸ್ಟಿನ್ ಇವಿಂಗ್ ಹೇಳಿದ್ದಾರೆ.

ದಟ್ಟ ಹೊಗೆಯಿಂದ ಆವರಿಸಿದ್ದ ವಿಮಾನದ ಅವಶೇಷಗಳ ಬಳಿಗೆ ತೆರಳಿ ತುರ್ತು ಸ್ಪಂದನಾ ಪಡೆಯವರು ಸ್ಪಂದಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ತಕ್ಷಣವೇ ಬೆಂಕಿ ನಂದಿಸಿದ್ದು, ಈ ಚಿತ್ರಣ ಅತ್ಯಂತ ಭಯಾನಕವಾಗಿತ್ತು ಎಂದು ಸಿಬ್ಬಂದಿ ಬಣ್ಣಿಸಿದ್ದಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries