HEALTH TIPS

ಹೈದರಾಬಾದ್ | 122 ಟನ್ ಕಲಬೆರಕೆ ಆಹಾರ ವಶ

 ಹೈದರಾಬಾದ್: ನಗರದ ಪೋಲಿಸರ ತಂಡ ಮಾ.19ರಿಂದ ಆರಂಭಗೊಂಡ ತನ್ನ ಮೊದಲ 100 ದಿನಗಳ ಕಾರ್ಯಾಚರಣೆಯಲ್ಲಿ 185 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಸುಮಾರು 122 ಟನ್‌ಗಳಷ್ಟು ಅಸುರಕ್ಷಿತ ಮತ್ತು ಕಲಬೆರಕೆ ಆಹಾರವನ್ನು ವಶಪಡಿಸಿಕೊಂಡಿದೆ. 


ಹೈದರಾಬಾದ್ ನಗರ ಪೋಲಿಸ್ ತಂಡವು ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‌ಎಂಸಿ), ಆಹಾರ ಸುರಕ್ಷತೆ ಮತ್ತು ಪಶು ವೈದ್ಯಕೀಯ ಇಲಾಖೆಗಳೊಂದಿಗೆ ನಗರದಾದ್ಯಂತ ದಾಳಿಗಳನ್ನು ನಡೆಸುತ್ತಿದೆ.

ಪೊಲೀಸರು ಪನೀರ್ ತಯಾರಿಕೆ ಘಟಕಗಳು, ಬೇಕರಿಗಳು, ನೀರು ಸಂಸ್ಕರಣಾ ಸ್ಥಾವರಗಳು, ಫಾಸ್ಟ್‌ಫುಡ್ ಅಂಗಡಿಗಳು, ಹಾಸ್ಟೆಲ್‌ಗಳು, ಮಾಂಸದ ಅಂಗಡಿಗಳು ಇತ್ಯಾದಿಗಳು ಸೇರಿದಂತೆ ನಿಯಮ ಉಲ್ಲಂಘಿಸಿದ 247ಕ್ಕೂ ಅಧಿಕ ಪ್ರಕರಣಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಜಿಎಚ್‌ಎಂಸಿಯ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಆಹಾರ ಕಲಬೆರಕೆಯಿಂದ ಉಂಟಾಗುವ ಆರೋಗ್ಯ ಅಪಾಯಗಳನ್ನು ಎತ್ತಿ ತೋರಿಸಿರುವ ಹೈದರಾಬಾದ್ ನಗರ ಪೊಲೀಸ್ ಆಯುಕ್ತ ವಿ.ಸಿ.ಸಜ್ಜನರ ಅವರು ,'ಆಹಾರ ಕಲಬೆರಕೆಯು ಗಂಭೀರ ಅಪರಾಧವಾಗಿದ್ದು, ಅದು ಕೊಲೆಗೆ ಸಮಾನ ಎಂದು ನಾವು ಪರಿಗಣಿಸಿದ್ದೇವೆ. ಈ ಮಾಫಿಯಾದಲ್ಲಿ ಭಾಗಿಯಾಗಿರುವವರ ವಿರುದ್ಧ ಮುನ್ನೆಚ್ಚರಿಕೆ ಬಂಧನ ಕಾಯ್ದೆಯಡಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು' ಎಂದು ತಿಳಿಸಿದ್ದಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries