HEALTH TIPS

ಜಿ.ಕೆ.ಚಾರಿಟೆಬಲ್ ಟ್ರಸ್ಟ್ ವಾಂತಿಚ್ಚಾಲು ವತಿಯಿಂದ 58ನೇ ವರ್ಷದ ಆಟಿಡೊಂಜಿ ಅಟ್ಟಣೆ

ಬದಿಯಡ್ಕ: ಜಿ.ಕೆ.ಚಾರಿಟೆಬಲ್ ಟ್ರಸ್ಟ್ ವಾಂತಿಚ್ಚಾಲು ಇದರ ವತಿಯಿಂದ 58ನೇ ವರ್ಷದ ಆಟಿಡೊಂಜಿ ಅಟ್ಟಣೆ ಕಾರ್ಯಕ್ರಮ ವಾಂತಿಚ್ಚಾಲು ಲಕ್ಷ್ಮೀ ನಿಲಯದಲ್ಲಿ ಜರಗಿತು. ಬೆಳಗ್ಗೆ ಗಣಪತಿ ಹೋಮ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು, ಭಜನೆ, ಕಲ್ಲುಟ್ಟಿ ಕೊರಗಜ್ಜ ದೈವಗಳಿಗೆ ಅಗೇಲು, ಟ್ರಸ್ಟಿನ ವಾರ್ಷಿಕೋತ್ಸವ ನಡೆಯಿತು. ನಾಗಬ್ರಹ್ಮ ಮಲರಾಯಿ ಮೂಲಸ್ಥಾನದ ಅಧ್ಯಕ್ಷ ಚೆನ್ನಪ್ಪ ಕುಲಾಲ್ ಎರುಗಲ್ಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಂದಾಳು ಅಮ್ಮು ಮೂಲ್ಯ ಬಿ.ಸಿ.ರೋಡ್, ಕುಲಾಲ ಅಡ್ಕ ಬಂಗೇರ ಸ್ಥಾನದ ಕಾರ್ಯದರ್ಶಿ ನಾರಾಯಣ ಬಂಗೇರ ಮುಗುಜಾಲು, ಸುಂದರ ಕಟ್ನಡ್ಕ, ತೇಜ ಕುಮಾರ ಪುತ್ತೂರು, ಈಶ್ವರ ಮೂಲ್ಯ ತೆಂಕಮಜಲು, ಜಗನ್ನಾಥ ರೈ ಕೊರೆಕ್ಕಾನ, ಕುಂಬ್ಡಾಜೆ ಭಂಡಾರ ಮನೆಯ ಅಶೋಕ ಪೊಡಿಪ್ಪಳ್ಳ ಉಪಸ್ಥಿತರಿದ್ದರು. 


ಹಿರಿಯರಾದ ನೀಲಮ್ಮ ಕೊಮ್ಮಂಡ, ಸುಂದರಿ ಪರಪ್ಪು, ಕಮಲ ಉಳಿಯ ಇವರನ್ನು ಸನ್ಮಾನಿಸಲಾಯಿತು. ಕೇರಳ ಸರ್ಕಾರದ ಪಿ.ಎಸ್.ಸಿ.ಯಲ್ಲಿ ಎರಡನೇ ರ್ಯಾಂಕ್ ವಿಜೇತೆಯಾಗಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಶಶಿಕಲಾ ಬಾಯಾಡಿ ಹಾಗೂ ಚಲನಚಿತ್ರ ನಟ ಯತೀಶ್ ಕೋರ್ಮಂಡ ದಂಪತಿಗಳನ್ನು ಅಭಿನಂದಿಸಲಾಯಿತು. ಟ್ರಸ್ಟ್‍ನ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಮಣಿಯಂಪಾರೆ ಸ್ವಾಗತಿಸಿ, ಲಕ್ಷ್ಮೀ ಸ್ಮಿತಾ ಮುಳಿಯಡ್ಕ ಪ್ರಾರ್ಥನೆ ಹಾಡಿದರು. ಹರ್ಷ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಮುಳಿಯಡ್ಕ, ಪ್ರಸಾದ್ ಕಳತ್ತೂರು, ಸತೀಶ್ ಕುಂಟಾಲು ಮೂಲೆ ಸಹಕರಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries